ಮೈಸೂರು: ಮೀಸಲಾತಿ ಹೋರಾಟ ಮಾಡುತ್ತಿರುವವರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಇಂತಹ ಸವಾಲುಗಳು ಬಂದಾಗ ಖುಷಿ ಆಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಓದಿ: ನೋಟಿಸ್ ಲೇಟರ್ ಅಲ್ಲ, ಅದು ಲವ್ ಲೇಟರ್ ಅಷ್ಟೇ.. ಯತ್ನಾಳರನ್ನ ಸರ್ಮರ್ಥಿಸಿಕೊಂಡ ಕತ್ತಿ, ಜಾರಕಿಹೊಳಿ
ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಜೆಟ್ ಸಿದ್ಧತಾ ಸಭೆಗಳು ನಡೆಯುತ್ತಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಎರಡು ದಿನ ನಾನು ಊರಲ್ಲಿ ಇರಲ್ಲ, ಇನ್ನು ಎರಡು ದಿನಗಳಲ್ಲಿ ಪೂರ್ವಭಾವಿ ಸಭೆಗಳು ಮುಕ್ತಾಯ ಆಗಲಿವೆ. ಹಣಕಾಸಿನ ಸ್ಥಿತಿ ನಡುವೆ ಮಂತ್ರಿ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಬಜೆಟ್ ಮಂಡಿಸುವೆ ಎಂದರು.
ಮೈಸೂರು ಏರ್‌ಪೋರ್ಟ್ ವಿಸ್ತರಣೆಗೆ ಆದ್ಯತೆ ನೀಡುವ ಉದ್ದೇಶವಿದೆ. ಟೀಕೆ ಮಾಡುವವರಿಗೆ ಬಜೆಟ್ ಉತ್ತರ ಆಗಲಿದೆ. ರಾಜ್ಯದಲ್ಲಿ ಯಾವುದೇ ಕೆಲಸಗಳು ನಿಂತಿಲ್ಲ, ವಿರೋಧ ಪಕ್ಷಗಳ ಟೀಕೆಗೆ ಉತ್ತರ ಕೊಡುವುದಿಲ್ಲ ಎಂದರು.
ಮೀಸಲಾತಿ ಹೋರಾಟ ವಿಚಾರ, ಎಲ್ಲರಿಗೂ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಸವಾಲುಗಳು ಬಂದಾಗ ಖುಷಿ ಆಗುತ್ತೆ. ಬಹಳ ಹುಮ್ಮಸ್ಸಿನಿಂದಲೇ ಅವುಗಳನ್ನು ಎದುರಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.