ETV Bharat / state

ಆಕ್ಸಿಜನ್‌ ಕೊರತೆ ಚಾಮರಾಜನಗರ ದುರಂತಕ್ಕೆ ಕಾರಣ; ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್​ಚಿಟ್​ - ಡಿಸಿ ರೋಹಿಣಿ ಸಿಂಧೂರಿ

ಮೇ.2ರ ಮಧ್ಯರಾತ್ರಿ ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 24 ರೋಗಿಗಳ ಸಾವಿಗೆ ಆಮ್ಲಜನಕದ ಕೊರತೆಯೇ ಮೂಲ ಕಾರಣ ಎಂದು ಹೈಕೋರ್ಟ್ ನೇಮಿಸಿದ ಮೂವರು ಸದಸ್ಯರ ಸಮಿತಿ ವರದಿಯಲ್ಲಿ ಸ್ಪಷ್ಟಪಡಿಸಿದೆ.

dc rohini sindhuri
ಡಿಸಿ ರೋಹಿಣಿ ಸಿಂಧೂರಿ
author img

By

Published : May 13, 2021, 11:57 AM IST

ಮೈಸೂರು: ಆಮ್ಲಜನಕದ ಕೊರತೆಯೇ ಚಾಮರಾಜನಗರ ದುರಂತಕ್ಕೆ ಕಾರಣವಾಗಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಮರಾಜನಗರಕ್ಕೆ ಆಮ್ಲಜನಕ ಸಾಗಿಸಲು ತಡೆ ಮಾಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿ, ಆಧಾರಗಳಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲ ಸಮಿತಿ ತಿಳಿಸಿದೆ.

ಮೇ 2ರ ರಾತ್ರಿ 11 ಗಂಟೆಯಿಂದ ಮೇ 3ರ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಇರಲಿಲ್ಲ. ಆಮ್ಲಜನಕ ಕೊರತೆಯೇ ದುರ್ಘಟನೆಗೆ ಕಾರಣವಾಗಿದ್ದು, ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಮೃತಪಟ್ಟ 24 ಮಂದಿಗೆ ಸಂಬಂಧಿಸಿದಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಇತರ ನಾಲ್ವರು ಸದಸ್ಯರ ಸಮಿತಿಯ ಮತ್ತೊಂದು ವರದಿಯಲ್ಲಿ, ಮಿದುಳು ಗಾಯದಿಂದ 7 ಮಂದಿ ಹಾಗೂ ಕೋವಿಡ್ ಕಾರಣದಿಂದ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ... ಎರಡನೇ ದಿನವೂ ದಾಖಲೆಗಳ ಜಪ್ತಿ

ಮೈಸೂರಿನ ಆಮ್ಲಜನಕ ಘಟಕದಿಂದ ಆಕ್ಸಿಜನ್ ಸಿಲಿಂಡರ್ ತರಿಸಿಕೊಳ್ಳುವುದು ಚಾಮರಾಜನಗರದ ಜಿಲ್ಲಾಡಳಿತ ಮತ್ತು ಆಸ್ಪತ್ರೆಯ ಜವಾಬ್ದಾರಿಯಾಗಿತ್ತು. ಈ ಸಂದರ್ಭದಲ್ಲಿ ಅವರು ಜಾಗೃತಗೊಂಡಿದ್ದರೆ ದುರಂತ ನಡೆಯುತ್ತಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ತವ್ಯ ನಿರ್ವಹಣೆಯಲ್ಲಿ ಚಾಮರಾಜನಗರ ಡಿಸಿ ವಿಫಲ

ಚಾಮರಾಜನಗರಕ್ಕೆ ಆಮ್ಲಜನಕ ಸಾಗಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಮಾಡಿದ್ದರು ಎಂಬ ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಯಾವುದೇ ಸಾಕ್ಷಿ, ದಾಖಲೆಗಳಿಲ್ಲ. ಆದ್ದರಿಂದ ದುರಂತಕ್ಕೆ ರೋಹಿಣಿ ಸಿಂಧೂರಿ ಅವರನ್ನು ಗುರಿ ಮಾಡುವುದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ರವಿ ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.