ಮೈಸೂರು: ದಸರಾದ ಕೇಂದ್ರಬಿಂದು ಜಂಬೂಸವಾರಿಯಲ್ಲಿ ಉತ್ಸವ ಮೂರ್ತಿಯಾಗಿ ಸಾಗುವ ಚಾಮುಂಡೇಶ್ವರಿ ಮೂರ್ತಿ ಅರಮನೆಗೆ ಆಗಮಿಸಿತು. ಇದೇ ಮೊದಲ ಬಾರಿಗೆ ಕಲಾತಂಡ ಹಾಗೂ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನ ಚಾಮುಂಡಿ ಬೆಟ್ಟದಿಂದ ಅರಮನೆಗೆ ಕೊಂಡೊಯ್ಯಲಾಗಿದೆ.
-
#WATCH | Karnataka: Goddess Chamundeshwari's idol reached Mysore Palace from Chamundi hills on Dasara with the traditional sound of drums. pic.twitter.com/luK1CSjRfQ
— ANI (@ANI) October 15, 2021 " class="align-text-top noRightClick twitterSection" data="
">#WATCH | Karnataka: Goddess Chamundeshwari's idol reached Mysore Palace from Chamundi hills on Dasara with the traditional sound of drums. pic.twitter.com/luK1CSjRfQ
— ANI (@ANI) October 15, 2021#WATCH | Karnataka: Goddess Chamundeshwari's idol reached Mysore Palace from Chamundi hills on Dasara with the traditional sound of drums. pic.twitter.com/luK1CSjRfQ
— ANI (@ANI) October 15, 2021
ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಕ್ಕೆ ಚಾಲನೆ ನೀಡಿ, ಬಳಿಕ ಮೆರವಣಿಗೆ ಮೂಲಕ ಅರಮನೆಗೆ ತರಲಾಗಿದೆ. ಈ ವೇಳೆ ದಾರಿಯುದ್ದಕ್ಕೂ ಜನತೆ ದೇವಿಯ ದರ್ಶನ ಪಡೆದಿದ್ದಾರೆ.
ಮೆರವಣಿಗೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ರಾಮ್ದಾಸ್ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಭಾಗಿಯಾಗಿದ್ದರು.
ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ತರಲಾಗಿದ್ದು, ಈ ವೇಳೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡಗಳು ಭಾಗಿಯಾಗಿದ್ದವು.
ಇದನ್ನೂ ಓದಿ: ಮೈಸೂರು ದಸರಾ: ಬನ್ನಿ ಮರಕ್ಕೆ ರಾಜವಂಶಸ್ಥ ಯದುವೀರ್ ಪೂಜೆ