ಮೈಸೂರು: ಶಿಶುವನ್ನು ಚರಂಡಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಚಾಮಲಾಪುರದಲ್ಲಿ ನಡೆದಿದೆ.
ಐದು ತಿಂಗಳ ಶಿಶುವನ್ನು ಆಚೆಗೆ ಎಸೆದಿರುವ ತಾಯಿಯೊಬ್ಬಳು ಹರಿಯುವ ಮೋರಿಗೆ ನಿರ್ದಯವಾಗಿ ಎಸೆದಿದ್ದಾಳೆ. ಮಾಡದ ತಪ್ಪಿಗೆ ಮೋರಿಯಲ್ಲಿ ಹಸುಗೂಸು ಉಸಿರು ನಿಲ್ಲಿಸಿದೆ. ಮಕ್ಕಳಿಗಾಗಿ ಹಂಬಲಿಸುವ ಮನಸ್ಸುಗಳು ಇಂತಹ ಕೃತ್ಯವೆಸಗಿದ ಕಿಡಿಗೇಡಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ದಾರಿಹೋಕರು ಮೋರಿಯಲ್ಲಿ ಶಿಶುವನ್ನು ಕಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಗುವಿನ ಮೃತದೇಹವನ್ನ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಿದ್ದಾರೆ.