ETV Bharat / state

ಚೆಂಡು ಉಮಾಪತಿ ಅಂಗಳದಲ್ಲಿದೆ, ಗೋಲು​ ಹೊಡೆಯುವುದು ಅವರಿಗೆ ಬಿಟ್ಟಿದ್ದು: 25 ಕೋಟಿ ವಂಚನೆ ಕೇಸ್​ಗೆ ದಚ್ಚು ಕಿಡಿ - ದರ್ಶನ್ ಹೆಸರಲ್ಲಿ ನಕಲಿ ಫೋರ್ಜರಿ

ತನ್ನ ಹೆಸರಲ್ಲಿ ನಡೆಯುತ್ತಿದ್ದ 25 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅವರೇ ಇಂದು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಕೇಸ್​ನ ಇಂಚಿಂಚು ಮಾಹಿತಿಯನ್ನು ದಾಸ ಬಿಚ್ಚಿಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್
author img

By

Published : Jul 12, 2021, 2:27 PM IST

Updated : Jul 12, 2021, 3:47 PM IST

ಮೈಸೂರು: ತಮ್ಮ ವಿರುದ್ಧ ನಡೆದಿದ್ದ ಸಂಚಿನ ಕುರಿತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗರಂ ಆಗಿದ್ದಾರೆ. ತಮ್ಮ ಹೆಸರಲ್ಲಿ ನಡೆಯುತ್ತಿದ್ದ 25 ಕೋಟಿ ರೂಪಾಯಿ ವಂಚನೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವತಃ ಅವರೇ ಇಂದು ಸ್ಪಷ್ಟನೆ ನೀಡಿದ್ದು, ಪ್ರಕರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮೈಸೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ದರ್ಶನ್​

ಜೂನ್​​ 6 ರಂದು ಉಮಾಪತಿಯಿಂದ ಕರೆ

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹರ್ಷನಿಗು ನನಗೂ ಹಳೆ ಪರಿಚಯ. ರಾಕೇಶ್ ಶರ್ಮಾ, ನಾಗು ನಾವೆಲ್ಲ ಒಟ್ಟಿಗೆ ಇರ್ತಿದ್ವಿ. ಜೂನ್​ 6 ರಂದು ನಿರ್ಮಾಪಕ ಉಮಾಪತಿ ನನಗೆ ಕಾಲ್​ ಮಾಡಿ 25 ಕೋಟಿ ರೂ ಸಾಲಕ್ಕೆ ನೀವು ಶ್ಯೂರಿಟಿ ಹಾಕಿದ್ದೀರಾ ಎಂದು ಪ್ರಶ್ನಿಸಿದ್ರು, ಏನು ಎತ್ತ ಅಂತಾ ವಿಚಾರಿಸಿದೆ. ಅವರು ಮತ್ತೇನು ಪ್ರತಿಕ್ರಿಯಿಸಲಿಲ್ಲ ಎಂದರು.

ಚೆಂಡು ಉಮಾಪತಿ ಅಂಗಳದಲ್ಲಿದೆ, ಗೋಲು​ ಹೊಡೆಯುವುದು ಅವರಿಗೆ ಬಿಟ್ಟಿದ್ದು: 25 ಕೋಟಿ ವಂಚನೆ ಕೇಸ್​ಗೆ ದಚ್ಚು ಕಿಡಿ

ಜೂನ್ 16 ರಂದು ಉಮಾಪತಿ ಜತೆ ಮನೆಗೆ ಬಂದ ಕುಮಾರಿ

ಜೂನ್​ 16 ರಂದು ಅರುಣಾ ಕುಮಾರಿಯವರನ್ನು ಉಮಾಪತಿ ಮನೆಗೆ ಕರೆದುಕೊಂಡು ಬಂದ್ರು. ಮನೆಗೆ ಬರುತ್ತಿದ್ದಂತೆಯೇ ಹರ್ಷ ಮಲಾಂಟಾ ಹಾಗೂ ಅವರ ಪತ್ನಿ ಊರ್ವಶಿ, ನನ್ನ ಮತ್ತೊಬ್ಬ ಸ್ನೇಹಿತ ವಿನಯ್ ಹಾಗೂ ಅವರ ಪತ್ನಿ ಹೆಸ್ರನ್ನು ಹೇಳಿದ್ರು. ಇಷ್ಟೆಲ್ಲಾ ಕೇಳಿದ ಮೇಲೆ ಅವರ ಮೇಲೆ ಒಂದು ರೀತಿಯ ನಂಬಿಕೆ ಬಂತು. ಅರುಣಾ ಆಗ ದಾಖಲೆಗಳನ್ನೆಲ್ಲ ತೋರಿಸಿದ್ರು. ಅದ್ರಲ್ಲಿ, ನನ್ನ ಆಧಾರ್​ ಕಾರ್ಡ್ ನಂಬರ್​ವೊಂದನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ. ಜತೆಗೆ ನಾನು ಹುಟ್ಟಿದ ಜಾಗ, ಜಿಲ್ಲೆ ಎಲ್ಲವನ್ನೂ ಹೇಳಿದ್ರು.

ಅನುಮಾನ ಬಂದು ಸ್ನೇಹಿತರಿಗೆ ದರ್ಶನ್ ಕಾಲ್

ಇದೇ ಸಮಯದಲ್ಲಿ ನಾನು ನಾಗುಗೆ ಕಾಲ್​ ಮಾಡಿ ಹರ್ಷ ಲೋನ್​ಗೆ ಟ್ರೈ ಮಾಡಿದ್ದಾನಾ ವಿಚಾರಿಸು ಅಂದೆ. ಆಗ ನಾಗು, ಹರ್ಷನಿಗೆ ಕಾನ್ಫರೆನ್ಸ್ ಕಾಲ್ ಮಾಡಿದ. ನಾನು ಯಾವುದೇ ಲೋನ್​ಗೆ ಅಪ್ಲೈ ಮಾಡಿಲ್ಲ ಅಂತಾ ಸ್ಪಷ್ಟನೆ ಕೊಟ್ಟ ಎಂದರು.

ಆಗ ನಾನು ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿರುವ ನನ್ನ ಮತ್ತೊಬ್ಬ ಸ್ನೇಹಿತ ರಾಕೇಶ್ ಶರ್ಮಾಗೆ ಕಾಲ್ ಮಾಡಿ, ಅರುಣಾ ಕೈಗೆ ಫೋನ್ ಕೊಟ್ಟೆ. ಅರುಣಾ ರಾಕೇಶ್ ಜತೆ ಚೆನ್ನಾಗಿಯೇ ಮಾತಾಡಿದ್ರು. ಅಲ್ಲದೆ, ಅರುಣ್ ಜತೆ ನಂದೀಶ್ ಮತ್ತು ಮಧುಕೇಶ್ ಎಂಬ ಮತ್ತಿಬ್ಬರೂ ಬಂದಿದ್ದರು. ಮಾತುಕತೆ ಮುಗಿದ ಮೇಲೆ ಸರ್​, ಲೋನ್ ಕೊಡಲು ನಿಮ್ಮ ತೋಟವನ್ನು ನೋಡ್ಬೇಕು ಅಂದಳು. ಆಗ, ತೋಟ ನನ್ನ ಹೆಂಡ್ತಿ ಹೆಸ್ರಲ್ಲಿದೆ ಅಂದೆ. ಆದರೂ, ನೋಡಬೇಕೆಂದು ಪಟ್ಟು ಹಿಡಿದಳು. ಸರಿ, ಹೋಗಿ ನೋಡಿಕೊಂಡು ಬನ್ನಿ ಅಂತಾ ಕಳಿಸಿ, ತೋಟದಲ್ಲಿದ್ದವರಿಗೆ ಕಾಲ್ ಮಾಡಿ ತಿಳಿಸಿದೆ. ಮೂರು ಗಂಟೆ ಸುಮಾರಿಗೆ ತೋಟಕ್ಕೆ ಹೋದ ಅವರು, ಲೋನ್ ಪಡೆಯಲು ದರ್ಶನ್ ಹಾಗೂ ಅವರ ಫ್ರೆಂಡ್ ಹರ್ಷ ನನಗೆ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ ಅಂದ್ರು. ನಿಮ್ಮದು ಯಾವ ಬ್ಯಾಂಕ್, ಎಲ್ಲಿಂದ ಬಂದಿದ್ದೀರಿ, ಐಡಿ ತೋರಿಸಿ ಅಂದಾಗ ಆಕೆ, ಬೆಂಗಳೂರಿನಿಂದ ಬಂದಿದ್ದೀವಿ. ಊರಿಗೆ ಹೋದ ಮೇಲೆ ಐಡಿ ಫೋಟೋ ಕಳಿಸ್ತೀವಿ ಅಂದಳು.

ಬೇರೊಂದು ಸಿಮ್​ನಿಂದ ಮೆಸೇಜ್

ಯಾವುದೋ ಒಂದು ಮೊಬೈಲ್​ನಿಂದ ಕಾಲ್​ ಬಂದಿತ್ತು. ಮತ್ತೆ ಮೆಸೇಜ್ ಮಾಡಿದಾಗ, ಬೇರೊಂದು ನಂಬರ್​ನಿಂದ ಮೆಸೇಜ್ ಬಂತು. ಆ ನಂಬರ್​ ಅನ್ನು ಟ್ರೂ ಕಾಲರ್​ನಲ್ಲಿ ಪರಿಶೀಲಿಸಿದಾಗ, ಅದು ಕುಮಾರ್ ಎಂಬಾತನದ್ದಾಗಿತ್ತು. ಕುಮಾರ್​ ದರ್ಶನ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರಾಗಿದ್ದಾರೆ.

ಅರುಣಾ ಪತಿಯಿಂದ ದೂರಾಗಿ ಐದಾರು ವರ್ಷ

ಮತ್ತೆ ಆ ನಂಬರ್​ಗೆ ಕಾಲ್​ ಮಾಡಿದಾಗ ಕುಮಾರ್ ಪತ್ನಿಯೇ ಅರುಣಾ ಅನ್ನೋದು ಗೊತ್ತಾಯ್ತು. ಅರುಣಾ ಪತಿಯಿಂದ ದೂರಾಗಿ ಐದಾರು ವರ್ಷಗಳಾಗಿವೆ ಅನ್ನೋದು ತಿಳಿಯಿತು. ಅಲ್ಲದೆ, ಆಕೆ ಯಾವ ಬ್ಯಾಂಕ್ ಉದ್ಯೋಗಿಯೂ ಅಲ್ಲ. ಆಕೆ ಪಿಯುಸಿ ಕೂಡ ಓದಿಲ್ಲ ಅಂತಾ ಪತಿಯೇ ಸ್ಪಷ್ಟೀಕರಣ ನೀಡಿದ್ದಾರೆ.

‘ಬ್ಯಾಂಕ್​ಗೆ ಹೋಗಿ ವಿಚಾರಿಸಿದ್ವಿ’

ಅರುಣಾ ಕುಮಾರಿ ಬಗ್ಗೆ ಅನುಮಾನ ಬಂದು ನಾವೇ ಬ್ಯಾಂಕ್​ಗೆ ಹೋಗಿ ಪರಿಶೀಲನೆ ನಡೆಸಿದ್ವಿ, ಆದ್ರೆ, ಇವರ್ಯಾರು ಅಲ್ಲಿ ಕಾಣಿಸಲಿಲ್ಲ ಎಂದರು. ಅಲ್ಲದೆ, ಉಮಾಪತಿಗೆ ನೀವು ಒಂದು ಕಂಪ್ಲೆಂಟ್ ಕೊಡಿ, ನಾನು ಆರ್​​ಆರ್​ನಗರದಲ್ಲಿ ಕಂಪ್ಲೆಂಟ್ ಕೊಡ್ತೀನಿ ಅಂದೆ. ಉಮಾಪತಿ ಅದಕ್ಕೆ ಒಪ್ಪಿಗೆ ಸೂಚಿಸಿದ್ರು.

‘ಜೂನ್ 19 ರಂದು ಸತ್ಯ ಹೇಳ್ತೀನಿ ಅಂದ್ಲು’

ಜೂನ್ 19 ರಂದು ನನಗೆ ಕರೆ ಮಾಡಿ ಸತ್ಯ ಹೇಳ್ತೀನಿ ಅಂದ್ರು. ಸರಿ ಬನ್ನಿ ಅಂದೆ, ಆಗ ಯಾರೋ ಮಲ್ಲೇಶ್ ಅನ್ನೋವ್ರು ಡಾಕ್ಯುಮೆಂಟ್ ಕೊಟ್ರು ಸರ್​ ಅಂದ್ಲು. ನಿಮಗೂ, ಅವರಿಗೂ ಏನ್ ಸಂಬಂಧ ಅಂತಾ ಕೇಳಿದ್ವಿ. ಆಗ ಅರುಣಾ, ಸರ್​ ನಾನು ನಿಜ ಹೇಳ್ತಿನಿ ಇಷ್ಟೆಲ್ಲಾ ಮಾಡಿಸಿದ್ದು, ಉಮಾಪತಿ ಅಂದಳು. ನಾನು ಕೂಡಲೆ ಉಮಾಪತಿಗೆ ಕಾಲ್ ಮಾಡಿದೆ. ಉಮಾಪತಿಯವ್ರು ಆಗ, ಆಕೆ ನನಗೆ ಫೇಸ್​ಬುಕ್​ ಫ್ರೆಂಡ್ ಅಷ್ಟೇ. ನನಗೆ ಮತ್ತೇನು ಗೊತ್ತಿಲ್ಲ ಅಂದ್ರು. ಮತ್ತೊಮ್ಮೆ ಆಕೆಯನ್ನೇ ಪ್ರಶ್ನಿಸಿದಾಗ, ಉಮಾಪತಿ ನಂಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದಳು.

ಉಮಾಪತಿ ಜತೆ ಅರುಣಾ ಚಾಟ್

ಏಪ್ರಿಲ್ 8 ರಿಂದ ಉಮಾಪತಿ, ಅರುಣಾ ಜತೆ ವಾಟ್ಸ್ಆ್ಯಪ್​ ಚಾಟ್ ಮಾಡಿದ್ದಾರೆ. ಆ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂದರು. ಅಲ್ಲದೆ, ನಿನ್ನೆಯೂ ಉಮಾಪತಿ ಜತೆ ನಾನು ಮಾತಾಡಿದ್ದೇನೆ. ಅವರು ಇದಕ್ಕೂ, ನನಗೂ ಸಂಬಂಧವಿಲ್ಲ ಎಂದರು.

ವೈಯಕ್ತಿಕ ದ್ವೇಷವಿಲ್ಲ

ನನ್ನ ಮತ್ತು ಉಮಾಪತಿ ನಡುವೇ ಯಾವುದೇ ವೈಮನಸ್ಸಿಲ್ಲ. ನಾನೀಗಲೆ ಅವರು ನಿರ್ಮಾಣ ಮಾಡುವ ಎರಡು ಚಿತ್ರಗಳಿಗೆ ಡೇಟ್ ಕೊಟ್ಟಿದ್ದಿನಿ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ನಾನು ಸುಮ್ಮನೆ ಬಿಡಲ್ಲ. ಅದೆಷ್ಟೇ ಆತ್ಮೀಯರಾಗಿದ್ರೂ ನಾನ್ ಬಿಡಲ್ಲ ಎಂದು ದರ್ಶನ್​ ಗುಡುಗಿದರು.

Last Updated : Jul 12, 2021, 3:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.