ಮೈಸೂರು: ಮಣ್ಣಿನಿಂದ ಕಲಾಕೃತಿ ಮಾಡುವ ವೃದ್ಧ ಬಸವರಾಜಪ್ಪನ ಕೈಚಳಕಕ್ಕೆ ಸಚಿವ ಸಿಸಿ ಪಾಟೀಲ್ ಬೆರಗಾಗಿ 2,000 ರೂ. ಹಣ ನೀಡಿದರು.
ಇಂದು ವಸ್ತುಪ್ರದರ್ಶನ ಆವರಣದಲ್ಲಿ ಕರಕುಶಲ ಕರ್ಮಿಗಳು ತಯಾರಿಸಿದ್ದ ಕಲಾಕೃತಿಗಳು ಮತ್ತು ಮಾರಾಟ ಮಳಿಗೆಗೆ ಭೇಟಿ ನೀಡಿದ ಸಚಿವ ಸಿಸಿ ಪಾಟೀಲ್ ಅಲ್ಲಿ ಸ್ಥಳದಲ್ಲೇ ಮಣ್ಣಿನಿಂದ ಮಡಿಕೆ ಹಾಗೂ ಕಲಾಕೃತಿ ಮಾಡುವ ಬಸವರಾಜಪ್ಪರ ಕೈಚಳಕಕ್ಕೆ ಮನಸೋತರು.
ಈ ಸುದ್ದಿಯನ್ನೂ ಓದಿ: ರಾಮ ಮಂದಿರಕ್ಕಾಗಿ ರಾಜಸ್ಥಾನಿ ವಿಷ್ಣು ಸಮಾಜದಿಂದ ದೇಣಿಗೆ ಸಂಗ್ರಹಿಸಿದ ಸಚಿವ ಕೆ ಎಸ್ ಈಶ್ವರಪ್ಪ
ಕಳೆದ 75 ವರ್ಷಗಳಿಂದ ತಲ ತಲಾಂತರವಾಗಿ ಕುಂಬಾರಿಕೆ ವೃತ್ತಿ ಮಾಡಿಕೊಂಡು ಬಂದಿರುವ ಬಸವರಾಜಪ್ಪ ಅವರು ಮಾಲ್ಗುಡಿ ಡೇಸ್, ಯುಗಪುರುಷ, ಮುತ್ತಿನ ಹಾರ ಸೇರಿದಂತೆ ಹಲವಾರು ಸಿನಿಮಾಗಳಿಗೆ ಮಡಿಕೆ ವಸ್ತುಗಳನ್ನು ಮಣ್ಣಿನಿಂದ ಮಾಡಿಕೊಟ್ಟು ಆ ಸಿನಿಮಾದಲ್ಲಿ ಪಾತ್ರವನ್ನು ಸಹ ಮಾಡಿದ್ದಾರೆ. ಇವರು ತಮಗೆ ಸಚಿವರು ನೀಡಿದ ಹಣದಿಂದ ಸಂತೋಷವಾಗಿದೆ ಎಂದು ಹೇಳಿ ಕುಂಬಾರಿಕೆ ವೃತ್ತಿಯ ಬಗ್ಗೆ ಈ ಟಿವಿ ಭಾರತ್ ಜೊತೆ ಕೊಂಚ ಮಾಹಿತಿ ಹಂಚಿಕೊಂಡಿದ್ದಾರೆ.