ETV Bharat / state

ಅಕ್ರಮ ಪೌತಿ ಖಾತೆ ಆರೋಪ: ತಹಶೀಲ್ದಾರ್ ಆರ್​ಐ ಮೇಲೆ ಪ್ರಕರಣ ದಾಖಲು

ಜಮೀನನ್ನು ಕಾನೂನು ಬಾಹಿರವಾಗಿ ಪೌತಿ ಖಾತೆ ಮಾಡಿದ ಆರೋಪದ ಮೇಲೆ ತಹಶೀಲ್ದಾರ್, ಆರ್ ಐ ಮತ್ತು ರಾಜಸ್ವ ನಿರೀಕ್ಷಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು
ಮೈಸೂರು
author img

By

Published : Oct 12, 2022, 4:15 PM IST

ಮೈಸೂರು: ನಗರದ ಕಸಬಾ ಹೋಬಳಿಯಲ್ಲಿ ಜಮೀನನ್ನು ಕಾನೂನು ಬಾಹಿರವಾಗಿ ಪೌತಿ ಖಾತೆ ಮಾಡಿದ ಆರೋಪದ ಮೇಲೆ ತಹಶೀಲ್ದಾರ್, ಆರ್ ಐ ಮತ್ತು ರಾಜಸ್ವ ನಿರೀಕ್ಷಕ ಸೇರಿದಂತೆ ಐವರ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ವಿಜಯನಗರದ ನಿವಾಸಿ ತಿರುಮಲೈ ರೋಲರ್ ಪ್ಲೋರ್ ಮಿಲ್ ಪ್ರೈವೇಟ್ ಲಿಮಿಟೆಡ್​ನ ನಿರ್ದೇಶಕ ಶ್ರೀಕಂಠಪ್ಪ ಅವರು ದೂರು ನೀಡಿದ್ದು, ಆ ದೂರಿನನ್ವಯ ತಹಶೀಲ್ದಾರ್, ಆರ್ ಐ, ರಾಜಸ್ವ ನಿರೀಕ್ಷಕ, ಜಯಲಕ್ಷ್ಮೀಭಾಯಿ, ಜಯಶ್ರೀ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಮೈಸೂರಿನ ಕಸಬಾ ಹೋಬಳಿ ಸರ್ವೆ ನಂ 155/2ರಲ್ಲಿ 2. 06 ಖರಾಬು ಭೂಮಿಯನ್ನು 1975ರಲ್ಲಿ ಅ. ವೆಂಕಟಪ್ಪ ಹೆಸರಿಗೆ ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಿ ನೀಡಲಾಗಿತ್ತು. 1982ರಲ್ಲಿ ಪ್ಲೋರ್ ಮಿಲ್ ನಿರ್ದೇಶಕರಾಗಿದ್ದ ನರಸಿಂಹಣ್ಣ ಅವರು ಆರ್. ವೆಂಕಟಪ್ಪ, ವೆಂಕಟರಾಮ್, ಕೃಷ್ಣ ಅವರಿಂದ ಖರೀದಿಸಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ನರಸಿಂಹಣ್ಣ ಅವರು ಮೂಲ ಕ್ರಯ ಪತ್ರವನ್ನು ಕಂಪನಿಗೆ ಕೊಟ್ಟಿರಲಿಲ್ಲ. ನಂತರ 1999ರಲ್ಲಿ ಅವರು ನಿಧನರಾಗಿದ್ದರು.

ನಂತರ ಸದರಿ ಜಮೀನಿಗೆ 1999ರಲ್ಲಿ 19. 47 ಲಕ್ಷ ಪಾವತಿಸಿ ಏಕನಿವೇಶನ ಕೈಗಾರಿಕಾ ವಿನ್ಯಾಸ ನಕ್ಷೆ ಪಡೆದುಕೊಂಡಿದ್ದು, ಭೂಮಿಯ ಮೇಲೆ ಕಂದಾಯ ಇಲಾಖೆಗೆ ಯಾವುದೇ ಹಕ್ಕಿಲ್ಲ. ಆದರೂ ನರಸಿಂಹಣ್ಣ ಅವರ ಮಕ್ಕಳಾದ ಜಯಲಕ್ಷ್ಮಿಬಾಯಿ, ಜಯಶ್ರೀಗೆ ಪೌತಿ ಖಾತೆ ಮಾಡಿಕೊಡಲಾಗಿದೆ ಎಂದು ಶ್ರೀಕಂಠಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ತಹಶೀಲ್ದಾರ್ ಸ್ಪಷ್ಟನೆ: ವಿಎ, ಆರ್​ಐ ಹಂತದಲ್ಲಿ ಪೌತಿ ಖಾತೆ ಮಾಡಲಾಗುವುದು ಆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಖಾತೆ ಬಗ್ಗೆ ತಕರಾರಿದ್ದರೆ ತಹಶೀಲ್ದಾರ್ ಹಂತದಲ್ಲಿ ವಿಚಾರಣೆ ನಡೆಸಿ, ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆದರೆ, ಖಾತೆ ಮಾಡುವ ವೇಳೆ ತಕರಾರು ಸಲ್ಲಿಕೆಯಾಗಿರಲಿಲ್ಲ. ಹಾಗಾಗಿ, ಇದರಲ್ಲಿ ನನ್ನ ಪತ್ರ ವಿಲ್ಸ್ ಎಂದು ತಹಶೀಲ್ದಾರ್ ಗಿರೀಶ್ ಬಿ ಎನ್ ಈಟಿವಿ ಭಾರತ್​ಗೆ ಸ್ಪಷ್ಟನೆ ನೀಡಿದರು.

ತಹಶೀಲ್ದಾರ್ ಮೇಲೆ ಎಫ್​ಐಆರ್​: ತಾಲೂಕು ದಂಡಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಇನ್ಸ್​ಪೆಕ್ಟರ್​ಗೆ ಯಾವುದೇ ಅಧಿಕಾರವಿಲ್ಲ. ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕಿತ್ತು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಓದಿ: ಕೋಲಾರದಲ್ಲಿ ಒತ್ತುವರಿ ತೆರವು ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.