ETV Bharat / state

ನ.30ರಿಂದ ಡಿ.1ರ ವರೆಗೆ ಚುಂಚನಕಟ್ಟೆ ಜಲಪಾತೋತ್ಸವ: ವಿವಿಧ ಶಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ಸಿಎಂ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಶನಿವಾರ ಸಂಜೆ 6.30ಕ್ಕೆ ಜಲಪಾತೋತ್ಸವ ಉದ್ಘಾಟಿಸಲಿದ್ದಾರೆ.

MLA D. Ravishankar
ಶಾಸಕ ಡಿ. ರವಿಶಂಕರ್ (ETV Bharat)
author img

By ETV Bharat Karnataka Team

Published : Nov 27, 2024, 7:59 PM IST

ಮೈಸೂರು: "ಜಿಲ್ಲೆಯ ಸಾಲಿಗ್ರಾಮ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿತಾಣವಾದ ಚುಂಚನಕಟ್ಟೆ ಜಾಲಪಾತದಲ್ಲಿ ಮೈಸೂರು ಜಿಲ್ಲಾಡಳಿತ ವತಿಯಿಂದ ನ. 30 ಮತ್ತು ಡಿ.1ರ ವರೆಗೆ ಚುಂಚನಕಟ್ಟೆ ಜಲಪಾತೋತ್ಸವ ಆಯೋಜಿಸಲಾಗಿದೆ. ಇದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ" ಎಂದು ಕೆ. ಆರ್ ನಗರದ ಶಾಸಕ ಡಿ. ರವಿಶಂಕರ್ ತಿಳಿಸಿದರು.

ಇಂದು ನಗರದ ಜಲದರ್ಶಿನಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಲಿಗ್ರಾಮ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಚುಂಚನಕಟ್ಟೆಯಲ್ಲಿ ಕಾವೇರಿ ತಾಯಿ 65 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಮನಮೋಹಕ ಜಲಪಾತ ಸೃಷ್ಟಿಸುತ್ತಾಳೆ. ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದ ಎಂಬ ಇತಿಹಾಸವಿದೆ. ಇಲ್ಲಿನ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿ ವಿಗ್ರಹವಿದೆ. ಕರ್ನಾಟದಲ್ಲೇ ಹೆಸರುವಾಸಿಯಾದ ದನಗಳ ಜಾತ್ರೆ ಇಲ್ಲಿ ಜನವರಿಯಲ್ಲಿ ನಡೆಯುತ್ತದೆ" ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಜಲಪಾತೋತ್ಸವ ಜರುಗಲಿದ್ದು, ರಾಜ್ಯ ಹಣಕಾಸು ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 50 ಲಕ್ಷದ ಖರ್ಚಿನಲ್ಲಿ ನಡೆಯಲಿದೆ. ಅಂದಾಜು 20 ಸಾವಿರ ಜನರು ಸೇರಲಿದ್ದಾರೆ. ಜಲಪಾತೋತ್ಸವಕ್ಕೆ ಬರುವ ಜನರ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ ಸೌಲಭ್ಯ ಹಾಗೂ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗುವುದು. ಹಾಗೂ ಗುಂಡಿ ಮುಚ್ಚುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ" ಎಂದು ಹೇಳಿದರು.

ಶಾಸಕ ಡಿ. ರವಿಶಂಕರ್ (ETV Bharat)

ಎರಡು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು: ಜಲಪಾತೋತ್ಸಕ್ಕೆ ಹೆಚ್ಚಿನ ಮೆರಗು ನೀಡಲು ಎರಡು ದಿನಗಳ‌‌‌ ಕಾಲ ವಿವಿಧ ಹೆಸರಾಂತ ಕಲಾವಿದರಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ.‌ ಶನಿವಾರ ಸಂಜೆ 6.30ಕ್ಕೆ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಜಲಪಾತೋತ್ಸವದ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಸಂಜೆ 4.30ಕ್ಕೆ ಬಸವಯ್ಯ ಮತ್ತು ತಂಡದಿಂದ ಜನಪದ ಝೇಂಕಾರ, ಸಂಜೆ 5 ಗಂಟೆಗೆ ಡಾ.ಕಾ.ರಾಮೇಶ್ವರಪ್ಪ ತಂಡದಿಂದ ಕನ್ನಡ ಗೀತಗಳ ಡಿಂಡಿಮ, ರಾತ್ರಿ 7.30 ಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್‌ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು‌ ಮಾಹಿತಿ ನೀಡಿದರು.

"ಭಾನುವಾರ ಸಂಜೆ 4.30ಕ್ಕೆ ರಶ್ಮಿ ತಂಡದವರಿಂದ ಜನಪದ ಗೀತೆಗಳು, 5ಕ್ಕೆ ಯು.ರಾಜೇಶ್‌ ಪಡೆಯಾರ್‌ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡದಿಂದ ಸಿ.ಅಶ್ವಥ್‌ ಗೀತೆಗಳ ಗಾಯನ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕಾರ್ಯಕ್ರಮ, ಸಂಜೆ 6.30ಕ್ಕೆ ಪುಪ್ಪಾವತಿ ಖ್ಯಾತಿಯ ನಟಿ ನಿಮಿಕಾ ರತ್ನಾಕರ್‌ ಹಾಗೂ ಕಿರುತೆರೆ ನಟಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಅವರಿಂದ ಸ್ಯಾಂಡಲ್​ವುಡ್‌ ನೈಟ್ಸ್‌, ರಾತ್ರಿ 7.30ಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ ಮಣಿಕಾಂತ್‌ ಕದ್ರಿ ಮತ್ತು ಹಂಸಿಕಾ ಅಯ್ಯರ್‌ ತಂಡದವರಿಂದ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದೆ" ಎಂದು ತಿಳಿಸಿದರು.

ಶ್ರೀರಾಮ ಸಕ್ಕರೆ ಕಾರ್ಖಾನೆ ಮರು ಪ್ರಾರಂಭ: ಕೃಷ್ಣರಾಜ ನಗರದಲ್ಲಿರುವ ಶ್ರೀರಾಮ ಸಕ್ಕರೆ ಕಾರ್ಖಾನೆ ಮರು ಪ್ರಾರಂಭದ ಕುರಿತು ಮಾತನಾಡಿ, "ಕಳೆದ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಿದೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಜನವರಿಯೊಳಗೆ ನೋಂದಣಿ ಮಾಡಿ, ‌ಮುಂದಿನ ವರ್ಷದಿಂದ ಕಬ್ಬು ಅರೆಯಲಾಗುವುದು. ಕಾರ್ಖಾನೆ ಮರು ಪ್ರಾರಂಭದ ಬಗ್ಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಪತ್ರದ ಮೂಲಕ ಆದೇಶ ನೀಡಿದ್ದಾರೆ" ಎಂದರು.

ನಿರಾಣಿ ಶುಗರ್ಸ್ಸ್‌ ಕಾರ್ಖಾನೆ ಮರು ಪ್ರಾರಂಭಕ್ಕೂ ಮನವಿ ಮಾಡಿದ್ದು, ಅದಕ್ಕೆ ಸರ್ಕಾರ ಒಪ್ಪಿ ಗುತ್ತಿಗೆಯಾಧಾರದ ಮೇಲೆ ನೀಡಿದೆ. ಜನವರಿಯೊಳಗೆ ನೋಂದಣಿ ಕಾರ್ಯ ಮುಗಿಸಿ ಮುಂದಿನ ವರ್ಷದಿಂದ ಕಬ್ಬು ಅರೆಯಲಾಗುವುದು. ನಿರಾಣಿ ಶುಗರ್ಸ್ಸ್‌ ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದೆ. ಅವರು ಫ್ಯಾಕ್ಟರಿ ನಡೆಸಲು ಆಗದೆ ಹೋದ ಸಂದರ್ಭದಲ್ಲಿ ಬೇರೆಯವರಿಗೆ ನೀಡುವ ಬಗ್ಗೆ ಯೋಚಿಸಲಾಗುವುದು. ಪಾಂಡವಪುರ ಸಕ್ಕರೆ ಕಾರ್ಖಾನೆಯ ಅವ್ಯವಸ್ಥೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು" ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಜೋಗದಲ್ಲಿ ಅಭಿವೃದ್ದಿ ಕಾಮಗಾರಿ ಶೇ 85 ರಷ್ಟು ಪೂರ್ಣ; 2025ರ ನವೆಂಬರ್​ಗೆ ಲೋಕಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.