ಮೈಸೂರು: ಜ.11 ರಂದು ನಗರದಲ್ಲಿ ಸಾಂಕೇತಿಕವಾಗಿ ಪಾದಯಾತ್ರೆ ಕೈಗೊಂಡು ಮೇಕೆದಾಟಿಗೆ ಹೊರಟ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಜ.13ರಂದು ಪ್ರಕರಣ ದಾಖಲಾಗಿದೆ.
![Case filed against HP Manjunath and others](https://etvbharatimages.akamaized.net/etvbharat/prod-images/14203571_thumbjpg.jpg)
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ -2020 ಅನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್(ಎ1), ಮಾಜಿ ಶಾಸಕ ವಾಸು(ಎ2), ನಂಜನಗೂಡು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ(ಎ3), ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನ(ಎ4೪), ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್(ಎ5), ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು (ಎ6) ಹಾಗೂ ಇತರೆ 20 ಮಂದಿ ವಿರುದ್ಧ ಸೆಕ್ಷನ್ 5(4), ಸೆಕ್ಷನ್ 6, ಸೆಕ್ಷನ್ 4, ಸೆಕ್ಷನ್ 51, ಸೆಕ್ಷನ್ 188 ಐಪಿಸಿ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ನವ ಉದ್ಯಮದ ರಾಜ್ಯವನ್ನಾಗಿಸಲು ಬಿಯಾಂಡ್ ಬೆಂಗಳೂರು ಜಾರಿ: ಸಿಎಂ ಬೊಮ್ಮಾಯಿ