ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅಮ್ಮನಿಂದ ಬೇರ್ಪಟ್ಟ ಎರಡು ಕರಡಿ ಮರಿಗಳನ್ನು ರಕ್ಷಣೆ ಮಾಡಿ, ಮೈಸೂರು ಮೃಗಾಲಯದಲ್ಲಿ ಪೋಷಣೆ ಮಾಡಲಾಗುತ್ತಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಕರಡಿ ಮರಿಗಳನ್ನು ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ಎರಡು ದಿನಗಳಾದರೂ ತಾಯಿ ಕರಡಿ ಬಾರದೇ ಇದ್ದರಿಂದ ಮರಿ ರಕ್ಷಣೆ ಮಾಡಿದ ಸಿಬ್ಬಂದಿ, ಅರಣ್ಯ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಓದಿ.. ಭಿಕ್ಷುಕಿ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ನಾಲ್ವರು ಕಾಮುಕರು ಅರೆಸ್ಟ್, ಮತ್ತೊಬ್ಬ ಎಸ್ಕೇಪ್
ಅಧಿಕಾರಿಗಳು ಮೃಗಾಲಯ ಕಾರ್ಯನಿರ್ವಾಹಕ ಅಧಿಕಾರಿಗೆ ಮಾಹಿತಿ ನೀಡಿ, ಮೃಗಾಲಯಕ್ಕೆ ಹಸ್ತಾಂತರ ಮಾಡಿದ್ದಾರೆ. ಮೊದಲು ಕರಡಿ ಮರಿಗಳಿಗೆ ಹಾಲು ಮಾತ್ರ ಕೊಡಲಾಗುತ್ತಿತ್ತು, ಈಗ ಸೆರಲ್ಯಾಕ್ ಕೂಡ ಕೊಡಲಾಗುತ್ತಿದೆ. ಕರಡಿ ಮರಿಗಳು ಆರೋಗ್ಯವಾಗಿದ್ದು, ಲವಲವಿಕೆಯಿಂದ ಆಟವಾಡಿಕೊಂಡಿವೆ.