ETV Bharat / state

ಬೀದಿ ನಾಯಿಗಳ ದಾಳಿಗೆ ಹಸುವಿನ ಕರು ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬೀದಿ ನಾಯಿಗಳ ದಾಳಿ

ರಸ್ತೆ ಬದಿಯಲ್ಲಿ ಮಲಗಿದ್ದ ಕರು ಮೇಲೆ ಬೀದಿ ನಾಯಿಗಳ ದಾಳಿ. ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್​​ ಬಳಿ ಘಟನೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆ.

Calf killed in stray dog attack
ರಸ್ತೆ ಬದಿ ಮಲಗಿದ್ದ ಕರು ಮೇಲೆ ಬೀದಿ ನಾಯಿಗಳ ದಾಳಿ
author img

By

Published : Jan 30, 2023, 3:08 PM IST

ರಸ್ತೆ ಬದಿ ಮಲಗಿದ್ದ ಕರು ಮೇಲೆ ಬೀದಿ ನಾಯಿಗಳ ದಾಳಿ

ಮೈಸೂರು: ಜಿಲ್ಲೆಯಲ್ಲಿ ಪ್ರತಿ ನಿತ್ಯ ಚಿರತೆ, ಹುಲಿ ಹಾಗೂ ಆನೆ ದಾಳಿಗೆ ಮನುಷ್ಯರು ಹಾಗೂ ಸಾಕು ಪ್ರಾಣಿಗಳು ಬಲಿ ಎಂಬ ಸುದ್ದಿಯನ್ನ ಕೇಳುತ್ತಿದ್ದೇವೆ. ಆದರೆ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಹಸುವಿನ ಕರು ಬಲಿಯಾಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಆರಂಭದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಶಂಕಿಸಲಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅದು ಬೀದಿ ನಾಯಿಗಳ ದಾಳಿ ಎಂಬ ವಿಚಾರ ಬಯಲಾಗಿದೆ.

ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್​​ ಬಳಿ ನಿನ್ನೆ (ಭಾನುವಾರ) ಮುಂಜಾನೆ 4 ಗಂಟೆಯ ಸಮಯದಲ್ಲಿ, ರಸ್ತೆ ಬದಿಯಲ್ಲಿ ಮಲಗಿದ್ದ ಕರು ಸಾವನ್ನಪ್ಪಿತ್ತು. ವಿಚಾರ ತಿಳಿದ ಜನರು ಚಿರತೆ ದಾಳಿ ಮಾಡಿ ಕರುವನ್ನು ಕೊಂದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕರು ಸತ್ತಿದ್ದ ಸ್ಥಳ ಹಾಗೂ ರಸ್ತೆಯ ಮೇಲ್ಭಾಗದಿಂದ ಕರುವನ್ನು ಎಳೆದುಕೊಂಡು ಹೋಗಿದ್ದ ಸ್ಥಳವನ್ನು ಪರಿಶೀಲನೆ ನಡೆಸಿದರು. ಆ ಸ್ಥಳದಲ್ಲಿ ಪ್ರಾಣಿಗಳ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿದಾಗ, ಅದು ಚಿರತೆಯ ಹೆಜ್ಜೆ ಗುರುತು ಅಲ್ಲ ಎಂಬುದನ್ನು ಖಚಿತ ಪಡಿಸಿಕೊಂಡರು. ಬಳಿಕ ಹತ್ತಿರದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ, ಕರುವನ್ನು ಬೀದಿ ನಾಯಿಗಳು ಸುತ್ತುವರಿದು, ಅದನ್ನ ಎಳೆದುಕೊಂಡು ಹೋಗಿ ಕಚ್ಚಿ ಸಾಯಿಸಿರುವುದು ಬೆಳಕಿಗೆ ಬಂದಿದೆ.

ಇದನ್ನು ಓದಿ: ಮೈಸೂರು: ಚಿರತೆ ದಾಳಿಗೆ ಬಲಿಯಾದ ಕರು

ನಿಟ್ಟುಸಿರು ಬಿಟ್ಟ ಜನತೆ: ನಗರದಲ್ಲಿ ಚಿರತೆ ಬಂದು ಕರುವನ್ನು ಕೊಂದು ಹಾಕಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಜನರು ಭಯಭೀತರಾಗಿದ್ದರು. ಆದರೆ ಕರುವಿನ ಮೇಲೆ ದಾಳಿ ಮಾಡಿದ್ದು, ಚಿರತೆ ಅಲ್ಲ ಬೀದಿ ನಾಯಿಗಳ ಗುಂಪು ಎಂಬ ಸುದ್ದಿ ತಿಳಿದ ಮೇಲೆ ಜನ ನಿಟ್ಟುಸಿರು ಬಿಟ್ಟಿದ್ದಾರೆ.

"ಮೈಸೂರು ನಗರದ ಕೆಲವು ಭಾಗಗಳಲ್ಲಿ ಕರುಗಳನ್ನು ಹಸುಗಳ ಜೊತೆ ಬಿಡುತ್ತಾರೆ. ಕೆಲವು ಹಸುಗಳು ಅವುಗಳನ್ನ ಮನೆಗೆ ಕರೆದುಕೊಂಡು ಹೋಗದೆ ಇರುವುದರಿಂದ ಕರುಗಳು ರಸ್ತೆ ಬದಿ ಮಲಗುತ್ತವೆ. ಆಗ ಬೀದಿ ನಾಯಿಗಳು ದಾಳಿ ಮಾಡುತ್ತವೆ" ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಬಸವರಾಜು ಅವರು ಈಟಿವಿ ಭಾರತಕ್ಕೆ ತಿಳಿಸಿದರು. ಇನ್ನು, ರಾಮಕೃಷ್ಣ ನಗರದ ಈ ಭಾಗದಲ್ಲಿ ಪಾರ್ಕ್ ಹಾಗೂ ಕಿರು ಅರಣ್ಯ ಪ್ರದೇಶವಿದೆ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು.

ಚಿರತೆ ಸೆರೆ: ಜನವರಿ 21ರಂದು ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ 11 ವರ್ಷದ ಬಾಲಕನನ್ನು ಬಲಿ ಪಡೆದಿದ್ದ ಚಿರತೆ ಸೆರೆ ಸಿಕ್ಕಿದೆ. ಗ್ರಾಮ ಹೊರವಲಯದಲ್ಲಿ ಜ.26ರಂದು ಮುಂಜಾನೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಈ ಚಿರತೆ ನೋಡಲು ಸ್ಥಳದಲ್ಲಿ ಜನರು ಮುಗಿಬಿದ್ದಿದ್ದರು. ಸೆರೆ ಸಿಕ್ಕ ಚಿರತೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ಮೈಸೂರು: ಬಾಲಕನ ಬಲಿ ಪಡೆದ ಚಿರತೆ ಬೋನಿನಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.