ETV Bharat / state

ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಬೇಡ ಅಂತ ಹೇಳಿದ್ದೆ: ಸಿ ಎಂ ಇಬ್ರಾಹಿಂ - ಕೋಲಾರ ಅಥವಾ ಮೈಸೂರು ಟಿಪ್ಪು ವಿವಿ

ಇತ್ತೀಚೆಗೆ ಬಿಡುಗಡೆಯಾದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಟಿಪ್ಪು ನೈಜ ಕನಸು ಪುಸ್ತಕದಲ್ಲಿ ಇಷ್ಟಬಂದಂತೆ ಬರೆದಿದ್ದಾರೆ. ಈ ಸಂಬಂಧ ನಾವು ಕೋಟ್೯ಗೆ ಹೋಗುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

c-m-ibrahim-reaction-about-tipu-jayanti
ಸಿ ಎಂ ಇಬ್ರಾಹಿಂ
author img

By

Published : Nov 16, 2022, 4:02 PM IST

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಬೇಡ, ಟಿಪ್ಪು ಜಯಂತಿ ಅಗತ್ಯವೂ ನಮಗಿಲ್ಲ ಎಂದು ನಾನು ಅಂದೇ ಹೇಳಿದ್ದೆ. ಆದರೆ, ಅವರು ಕೇಳಲಿಲ್ಲ. ಬಿಜೆಪಿ - ಕಾಂಗ್ರೆಸ್ ಟಿಪ್ಪು ಹೆಸರಲ್ಲಿ ರಾಜಕೀಯ ಮಾಡುತ್ತಿವೆ. ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಅವರು, ಟಿಪ್ಪು ಪ್ರತಿಮೆ ಸ್ಥಾಪನೆ ಸಂಬಂಧ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಮ್ಮ ಸಮುದಾಯದಲ್ಲಿ ಪ್ರತಿಮೆ, ಮೂರ್ತಿ ಎಂಬುದಿಲ್ಲ. ಹೀಗಾಗಿ ಟಿಪ್ಪು ಪ್ರತಿಮೆ ನಿರ್ಮಿಸುವ ಪ್ರಶ್ನೆಯೇ ಇಲ್ಲ. ರಾಜಕೀಯಕ್ಕಾಗಿ ಧರ್ಮ ಬಳಸಿಕೊಳ್ಳಬಾರದು. ತನ್ವೀರ್ ಸೇಠ್ ಪ್ರತಿಮೆ ನಿರ್ಮಿಸುತ್ತೇನೆಂದೂ ಮುಂದಾದರೆ ಅವನಿಗೂ ಉಸ್ಮಾನಿಗಳಿಂದ ಮಾಹಿತಿ ಪಡೆದು ಮಾತನಾಡುವಂತೆ ಹೇಳುತ್ತೇನೆ. ನಮ್ಮ ಇಸ್ಲಾಂ ಧರ್ಮದಲ್ಲಿ ಜಗತ್ತಿನ ಯಾವ ಭಾಗದಲ್ಲೂ ಎಲ್ಲಿಯೂ ಪ್ರತಿಮೆ ನಿರ್ಮಿಸಿಲ್ಲ. ಹೀಗಾಗಿ ನಾವು ಟಿಪ್ಪು ಪ್ರತಿಮೆ ನಿರ್ಮಿಸಲ್ಲ‌ ಎಂದರು.

ಹಿಂದೂ- ಮುಸ್ಲಿಂರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ. ಆದರೆ, ಬಿಜೆಪಿಯವರು ಹುಳಿ ಹಿಂಡುತ್ತಿದ್ದಾರೆ. ಸಂಸದ ಪ್ರತಾಪಸಿಂಹ ಅಭಿವೃದ್ಧಿ ಕೆಲಸ ಮಾಡದೇ, ಧರ್ಮಗಳ ನಡುವೆ ಕಿತ್ತಾಡುವಂತೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಇಬ್ರಾಹಿಂ ಕಿಡಿಕಾರಿದರು.

ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಬೇಡ ಅಂತ ಹೇಳಿದ್ದೆ ಎಂದ ಸಿ ಎಂ ಇಬ್ರಾಹಿಂ

ಟಿಪ್ಪು ನೈಜ ಕನಸುಗಳ ವಿರುದ್ಧ ಕೋರ್ಟ್​ಗೆ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಟಿಪ್ಪ ನೈಜ ಕನಸು ಪುಸ್ತಕದಲ್ಲಿ ಇಷ್ಟಬಂದಂತೆ ಬರೆದಿದ್ದಾರೆ. ಈ ಸಂಬಂಧ ನಾವು ಕೋಟ್೯ಗೆ ಹೋಗುತ್ತೇವೆ ಎಂದರು.

ಕೋಲಾರ ಅಥವಾ ಮೈಸೂರು ಟಿಪ್ಪು ವಿವಿ: ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಮೈಸೂರು ಅಥವಾ ಕೋಲಾರದಲ್ಲಿ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ಥಾಪಿಸುವ ತನ್ವೀರ್ ಸೇಠ್ ಹೇಳಿಕೆಗೆ ಸಿದ್ದರಾಮಯ್ಯ ಬೆಂಬಲ.. ಡಿಕೆಶಿ ಮೌನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.