ETV Bharat / state

ಹುಣಸೂರಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್​​​ಗೆ ಗೆಲುವು: ಪರಮೇಶ್ವರ್​​​​

ಮೈಸೂರಿನ ಹುಣಸೂರಲ್ಲಿ ಉಪ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಮಂಜುನಾಥ್​ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್​​ ವಿಶ್ವಾಸ ವ್ಯಕ್ತಪಡಿಸಿದರು.

author img

By

Published : Nov 25, 2019, 5:21 PM IST

ಹುಣಸೂರಲ್ಲಿ ಪರಮೇಶ್ವರ್​ರಿಂದ ಉಪಚುನಾವಣಾ ಪ್ರಚಾರ

ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಮಂಜುನಾಥ್​ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್​ ವಿಶ್ವಾಸ ವ್ಯಕ್ತಪಡಿಸಿದರು.

ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯ ನಂತರ ಮಾತನಾಡಿದ ಅವರು, ಹುಣಸೂರಿನಲ್ಲಿ ಕಾಂಗ್ರೆಸ್​ ಗೆಲುವು ಖಚಿತ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಚುನಾವಣೆಗಳಲ್ಲಿ ಪಕ್ಷಾಂತರಿಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ರಾಜಕಾರಣಿಗಳು ಭಾಷಣ ಮಾಡ್ತಾರೆ. ಆದರೆ ಮತದಾರರು ಸೈಲೆಟಾಂಗಿ ಅನರ್ಹರಿಗೆ ಉತ್ತರ ಕೊಡುತ್ತಾರೆ ಎಂದರು.

ಹುಣಸೂರಲ್ಲಿ ಪರಮೇಶ್ವರ್​ ಪ್ರಚಾರ

ಇನ್ನು ಕಾಂಗ್ರೆಸ್​ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಆದರೆ ಸಿದ್ದರಾಮಯ್ಯನವರು ಏಕಾಂಗಿಯಾಗಿದ್ದಾರೆ ಎಂದು ಬಿಜೆಪಿಯವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್​​ ನಿರ್ಣಯಿಸುತ್ತೆ. ಅದಕ್ಕೂ ಮುನ್ನ ಜನರ ನಿರ್ಧಾರ ಮುಖ್ಯವಾಗಿರುತ್ತದೆ ಎಂದು ಮಾಧ್ಯವದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಕ್ಕೂ ಮುನ್ನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Intro:ಡಾ.ಜಿ.ಪರಮೇಶ್ವರ್

Body:ಡಾ.ಪರಮೇಶ್ವರ್

Conclusion:ನನ್ನ ಸಿಎಂ ಮಾಡೋದು ಬಿಡೋದು ಹೈಕಮಾಂಡ್: ಡಾ.ಜಿ.ಪರಮೇಶ್ವರ್ ‌
ಮೈಸೂರು(ಹುಣಸೂರು)
ರಾಜ್ಯ ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ನಲ್ಲಿಯೇ' ಸಿಎಂ ಪಟ್ಟ'ಕ್ಕಾಗಿ ಪಕ್ಷದ ಮನದಾಳದ ಮಾತುಗಳು ಹೊರಬರುತ್ತಿವೆ.
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಸಭೆಯ ನಂತರ ಮಾತನಾಡಿದ ಅವರು,ದಲಿತ ಸಿಎಂ ಆಗಿನಿಂದ ಕೇಳಿ ಬರುತ್ತದೆ. ಆದರೆ ಸಿದ್ದರಾಮಯ್ಯ ಅವರು ನಮ್ಮನ್ನು ಮುಖ್ಯಮಂತ್ರಿ ಮಾಡುವುದಲ್ಲ. ಪಕ್ಷದ ಹೈಕಮಾಂಡ್ ಹಾಗೂ ಜನರ ಆದೇಶದ ಮೇಲಿದೆ.ಆ ಸಂದರ್ಭಗಳು ಒದಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ವಿಶ್ವನಾಥ್ 'ಗಳಸ್ಯ-ಗಂಟಸ್ಯ' ಸ್ನೇಹಿತರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಹೋದಾಗ ಬೇಡ ಅಂತ ಹೇಳಿದ್ದೆ.ಆದರೂ ಹೋದರು.ಮತ್ತೆ ಪಕ್ಷಾಂತರ ಮಾಡಿ ಬಿಜೆಪಿಗೆ ಹೋಗಿದ್ದು ನೋವು ತಂದಿದ್ದೆ, ತಮ್ಮ‌ ಸ್ವಾರ್ಥಕ್ಕಾಗಿ ಪಕ್ಷಾಂತರಗೊಂಡಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಚುನಾವಣೆಗಳಲ್ಲಿ ಪಕ್ಷಾಂತರಗಳಿಗೆ ಪಾಠ ಕಲಿಸಿದ್ದಾರೆ. ರಾಜಕಾರಣಿಗಳು ಭಾಷಣ ಮಾಡ್ತಾರೆ.ಆದರೆ ಮತದಾರರು ಸೈಲಾಟಾಂಗಿ ಅನರ್ಹರಿಗೆ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.