ಮೈಸೂರು : ನಾಲೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸರಗೂರು ತಾಲೂಕಿನಲ್ಲಿ ನಡೆದಿದೆ.
ಸರಗೂರು ತಾಲೂಕಿನ ಸೋಗಳ್ಳಿ ಗ್ರಾಮದ ಶ್ರೇಯಸ್ (16) ನೀರಿನಲ್ಲಿ ಮೃತಪಟ್ಟ ಬಾಲಕ. ತೋರವಳ್ಳಿ ಗ್ರಾಮದ ಅಜ್ಜಿ ಮನೆಗೆ ಹಬ್ಬಕ್ಕೆಂದು ಬಂದಿದ್ದ ಈತ, ಮೂವರು ಗೆಳೆಯರ ಜೊತೆ ನಾಲೆಗೆ ಈಜಲು ಹೋಗಿದ್ದ.
ನೀರಿನಲ್ಲಿ ಸಿಲುಕಿ ಶ್ರೇಯಸ್ ಮೃತಪಟ್ಟರೆ, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಣ್ಣೆದುರಿಗೆ ಸ್ನೇಹಿತನ ಪ್ರಾಣ ಪಕ್ಷಿ ಹಾರಿ ಹೋದದ್ದನ್ನು ಕಂಡು ಮೂವರು ಸ್ನೇಹಿತರು ಶೋಕದಲ್ಲಿ ಮುಳುಗಿದ್ದರು. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.