ETV Bharat / state

ಮೇಕೆದಾಟು ಪಾದಯಾತ್ರೆ ಘೋಷಿಸಿದ ಮೇಲೆ ಜೆಡಿಎಸ್-ಬಿಜೆಪಿಯಲ್ಲಿ ನಡುಕ ಶುರುವಾಗಿದೆ : ಸಿದ್ದರಾಮಯ್ಯ - ಮೈಸೂರು ಕಾಂಗ್ರೆಸ್ ಅದಿವೇಸನ

ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂದು ಪಾದಯಾತ್ರೆ ಘೋಷಣೆ ಮಾಡಿದ ಮೇಲೆ ಜೆಡಿಎಸ್​ ಮತ್ತು ಭಾರತೀಯ ಜನತಾ ಪಾರ್ಟಿಗೆ ನಡುಕ ಉಂಟಾಗಿದೆ. ಈ ಪಾದಯಾತ್ರೆಯನ್ನು ನಾವು ರಾಜಕಾರಣಕ್ಕಾಗಿ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್‌ಗೆ ಇದರಿಂದ ರಾಜಕೀಯವಾಗಿ ಲಾಭವಾಗುತ್ತದೆ ಎನ್ನುವುದನ್ನೂ ಅಲ್ಲಗೆಳೆಯುವಂತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Former CM Siddaramaiah
ಮೇಕೆದಾಟು ಪಾದಯಾತ್ರೆ ಘೋಷಿಸಿದ ಮೇಲೆ ಜೆಡಿಎಸ್, ಬಿಜೆಪಿಗೆ ನಡುಕ ಶುರುವಾಗಿದೆ: ಸಿದ್ದರಾಮಯ್ಯ
author img

By

Published : Jan 4, 2022, 4:42 AM IST

ಮೈಸೂರು: ಮೇಕೆದಾಟು ಯೋಜನೆಗಾಗಿ ನಾವು ಪಾದಯಾತ್ರೆ ಘೋಷಣೆ ಮಾಡಿದ ಮೇಲೆ ಬಿಜೆಪಿ, ಜೆಡಿಎಸ್‌ಗೆ ನಡುಕ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮಾವಾರ ವ್ಯಂಗ್ಯವಾಡಿದರು.

ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ‌ ಹಾಗೂ ಮೇಕೆದಾಟು ಯೋಜನೆಗಾಗಿ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂದು ಪಾದಯಾತ್ರೆ ಘೋಷಣೆ ಮಾಡಿದ ಮೇಲೆ ಜೆಡಿಎಸ್​ ಮತ್ತು ಭಾರತೀಯ ಜನತಾ ಪಾರ್ಟಿಗೆ ನಡುಕ ಉಂಟಾಗಿದೆ. ಈ ಪಾದಯಾತ್ರೆಯನ್ನು ನಾವು ರಾಜಕಾರಣಕ್ಕಾಗಿ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್‌ಗೆ ಇದರಿಂದ ರಾಜಕೀಯವಾಗಿ ಲಾಭವಾಗುತ್ತದೆ ಎನ್ನುವುದನ್ನೂ ಅಲ್ಲಗೆಳೆಯುವಂತಿಲ್ಲ ಎಂದರು.

ಮೇಕೆದಾಟು ಪಾದಯಾತ್ರೆ ಘೋಷಿಸಿದ ಮೇಲೆ ಜೆಡಿಎಸ್, ಬಿಜೆಪಿಗೆ ನಡುಕ ಶುರುವಾಗಿದೆ: ಸಿದ್ದರಾಮಯ್ಯ

ಜೆಡಿಎಸ್​ ಬುಡ ಅಲ್ಲಾಡುತ್ತಿದೆ:

ಜೆಡಿಎಸ್‌ನವರಿಗೆ ಭಯ ಏಕೆ ಬಂದಿದೆ ಎಂದರೆ, ಈ ಭಾಗದಲ್ಲಿ ನಾವೆ ವಾರಸುದಾರರು ಎಂದು ಅವರು ತಿಳಿದಿದ್ದರು. ಅದು ಇತ್ತೀಚೆಗೆ ಹುಸಿಯಾಗಿದೆ, ಮಂಡ್ಯ, ತುಮಕೂರು, ಕೋಲಾರ ಮತ್ತು ಬೆಂಗಳೂರು ಗ್ರಾಮಂತರದ ಸ್ಥಳೀಯ ಚುನಾವಣೆಯಲ್ಲಿ ನಾವು ಗೆದ್ದಮೇಲೆ ಜಡಿಎಸ್​ ಪಕ್ಷದ ಬುಡ ಅಲ್ಲಾಡಲು ಶುರುವಾಗಿದೆ. ಕುಮಾರಸ್ವಾಮಿಗೆ ಹತಾಷೆ ಶುರುವಾಗಿದೆ. ನಮ್ಮ ಹೋರಾಟ ಹೈಜಾಕ್ ಎಂದು ಹೇಳುತ್ತಿದ್ದಾರೆ. ಆದರೆ ಆ ಮಾತು ಸತ್ಯಕ್ಕೆ ದೂರವಾದದ್ದು ಎಂದರು.

ಆರ್​ಎಸ್​ಎಸ್​ ಹುನ್ನಾರ:

ಪ್ರಜಾಪ್ರಭುತ್ವ, ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಡೆತ ಬಿದ್ದಿದೆ. ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದಿರುವ ದಿನಗಳು ಬಂದಿವೆ. ಮತಾಂತರ ಕಾಯ್ದೆ, ದೇವಾಲಯಗಳ ಸ್ವಂತಂತ್ರಗೊಳಿಸುವ ವಿಚಾರದಲ್ಲಿ ಬಿಜೆಪಿ ದೊಡ್ಡ ಹುನ್ನಾರ ನಡೆಸುತ್ತಿದೆ. ಅನ್ಯ ಜಾತಿಯವರು ಮದುವೆಯಾದ್ರೆ ಮತಾಂತರ ನಿಷೇಧದ ಮೂಲಕ ಕ್ರಮ ಕೈಗೊಳ್ಳತ್ತೇವೆ ಅನ್ನುವುದು ಆರ್‌ಎಸ್‌ಎಸ್‌ ಹುನ್ನಾರ, ದೇಶದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದರೂ ತಲೆಕೆಡಿಸಿಕೊಳ್ಳೋದನ್ನ ಬಿಟ್ಟು ಜನರ ಮನಸ್ಸುಗಳನ್ನ ಡೈವರ್ಟ್ ಮಾಡುವ ಸಲುವಾಗಿ ಈ ರೀತಿಯ ತಂತ್ರ ಉಪಯೋಗಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ ಜಾರಿಯಾದರೂ ನಾವು ನಮ್ಮ ಪಾದಯಾತ್ರೆ ನಿಲ್ಲಿಸುವುದಿಲ್ಲ: ಸರ್ಕಾರಕ್ಕೆ ಡಿಕೆಶಿ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.