ಮೈಸೂರು: ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ, ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಕ್ಕರಹಳ್ಳಿ ಕೆರೆ, ಹೆಬ್ಬಾಳ ಕೆರೆ ಹಾಗೂ ಮೇಟಗಳ್ಳಿಯಲ್ಲಿ ಸಾವನ್ನಪ್ಪಿದ ಕೋಳಿಗಳು ಸಾವನಪ್ಪಿದ್ದು, ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಸತ್ತ ಹಕ್ಕಿಗಳು ಮತ್ತು ಕೋಳಿಗಳ ಸ್ಯಾಂಪಲ್ ನನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. ನೆಗೆಟಿವ್ ರಿಪೋರ್ಟ್ ಬಂದಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಇನ್ನು ಎಲ್ಲ ಅಧಿಕಾರಿಗಳಿಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಆದೇಶ ಮಾಡಿದ್ದೇವೆ. ರಸ್ತೆ ಬದಿಯಲ್ಲಿ ಕೋಳಿ ಮಾಂಸ ಹಾಗೂ ಕುರಿ ಮಾಂಸ ಕತ್ತರಿಸುವುದನ್ನು ನಿಯಂತ್ರಿಸಲು ಆದೇಶ ನೀಡಿದ್ದೇವೆ. ಆದರೂ ನಮ್ಮ ಜಾಗೃತಿಯಲ್ಲಿ ನಾವು ಇರಬೇಕು. ಕೋಳಿಗಳು ಹೇಗೆ ಸಾವನ್ನಪ್ಪಿದೆ ಎಂಬುದನ್ನು ಕಂಡುಹಿಡಿಯಲಾಗುವುದು. ಹಕ್ಕಿ ಜ್ವರದ ಬಗ್ಗೆ ಭೀತಿ ಬೇಡ ಎಂದು ಭರವಸೆ ನೀಡಿದರು.