ETV Bharat / state

ಪ್ಲಾಸ್ಟಿಕ್​ಗೆ ಬೈ ಬೈ .. ಇನ್ಮುಂದೆ ಬರಲಿವೆ ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್.. ಟೆಕ್ನಾಲಜಿ ಕುರಿತು ಇಲ್ಲಿದೆ ಮಾಹಿತಿ

author img

By ETV Bharat Karnataka Team

Published : Oct 1, 2023, 7:22 AM IST

Updated : Oct 1, 2023, 8:18 AM IST

ಮೈಸೂರಿನ DFRL-DRDO ವಿಜ್ಞಾನಿಗಳು ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್ ಟೆಕ್ನಾಲಜಿಯನ್ನು ಕಂಡುಹಿಡಿದಿದ್ದು, ಇದು ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.

ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್
ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್
ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್ ಕುರಿತು ಮಾಹಿತಿ

ಮೈಸೂರು: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮೈಸೂರಿನ DFRL-DRDO ವಿಜ್ಞಾನಿಗಳು ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್ ಟೆಕ್ನಾಲಜಿಯನ್ನು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನವನ್ನು ಸಿರಿಧಾನ್ಯ ಸಮಾವೇಶದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಟೆಕ್ನಾಲಜಿ ಪ್ಲಾಸ್ಟಿಕ್ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸುತ್ತದೆ ಎಂಬ ಬಗ್ಗೆ ಸಂಶೋಧಕ ವಿಜ್ಞಾನಿ ಡಾ. ಜಾನ್ ಸಿ, ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಪ್ಲಾಸ್ಟಿಕ್ ಈಗ ಪ್ರಪಂಚವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು, ಇದರ ಬಳಕೆಯಿಂದ ಪರಿಸರದಲ್ಲಿ ಮಾಲಿನ್ಯದ ಜೊತೆಗೆ ಸಮಸ್ಯೆಗಳು ಉಂಟಾಗುತ್ತಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ DFRL-DRDO ವಿಜ್ಞಾನಿಗಳು ಸಂಶೋಧನೆ ಮಾಡಿರುವ ಹೊಸ ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್ ಟೆಕ್ನಾಲಜಿ ಪರಿಹಾರವಾಗಿದೆ.

ನಾವು ಪ್ರತಿಯೊಂದು ಕಡೆ ಈಗ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಕೆಯನ್ನು ನೋಡುತ್ತೇವೆ. ಇಂತಹ ಪ್ಲಾಸ್ಟಿಕ್ ಬಾಟಲ್​ಗಳನ್ನು ಬಳಸಿದ ನಂತರ ಬಿಸಾಡುತ್ತಾರೆ. ಆದರೆ ಬಿಸಾಡಿದ ಈ ಬಾಟಲ್​ಗಳು ವರ್ಷಾನುಗಟ್ಟಲೆ ಕರಗದೆ ಹಾಗೆ ಉಳಿದುಕೊಂಡು ಬಿಡುತ್ತವೆ. ಈ ಮೂಲಕ ಪರಿಸರದಲ್ಲಿ​ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಪರ್ಯಾಯವಾಗಿ ಹೊಸ ಟೆಕ್ನಾಲಜಿಯನ್ನು ಕಂಡುಹಿಡಿದಿದ್ದಾರೆ. ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬ ವಿವರ ಹೀಗಿದೆ.

ಭಾರತ ಸರ್ಕಾರ ಏಕ ಬಳಕೆಯ ಪ್ಲಾಸ್ಟಿಕ್​ನ್ನು ಬ್ಯಾನ್ ಮಾಡಿದೆ. ಕಸ ವಿಲೇವಾರಿ ಮಾಡದಿರುವುದು, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಾರಣವಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರವಾಗಿ ಜೈವಿಕ ವಿಘಟನೆಯ ಕ್ರಿಯೆಗೆ ಸಹಕಾರಿಯಾಗುವ ಅಂಶವಾದ ಪೊವ್ಲಿ ಲ್ಯಾಕ್ಟೋಯಿಕ್ ಆಮ್ಲದಿಂದ ಬಾಟಲ್​ನ್ನು ಸೃಷ್ಟಿ ಮಾಡಿದ್ದೀವಿ. ಇದು ವಾತಾವರಣದಲ್ಲಿ ಕರುಗುತ್ತದೆ. ಈ ಮೂಲಕ ಪರಿಸರಕ್ಕೆ ಸಹಾಯವು ಆಗಲಿದೆ ಎಂದು ಡಾ. ಜಾನ್​ ಸಿ ಹೇಳಿದ್ದಾರೆ.

ಕಬ್ಬು ಹಾಗೂ ಇನ್ನಿತರ ಪದಾರ್ಥಗಳನ್ನು ಸಂಸ್ಕರಿಸಿ ಅದರ ಮೂಲಕ ನಾವು ತಯಾರಿಸುತ್ತೇವೆ. ಇದನ್ನು ತಯಾರು ಮಾಡುವ ವೇಳೆಯಲ್ಲಿ ನಾನಾ ಸಮಸ್ಯೆಗಳು ಎದುರಿಸಿದ್ದೇವೆ. ಜತೆಗೆ ಕೆಲವು ಉದ್ಯಮಿಗಳ ಸಹಾಯದಿಂದ ಅದನ್ನು ಉತ್ಪಾದಿಸಲು ಸಹಕರಿಯಾಯಿತು. ಇಂಜೆಕ್ಷನ್ ಮೌಲ್ಡ್ ಟೆಕ್ನಾಲಜಿ ಮೂಲಕ ನಾವು ಬಾಟಲಿಗಳನ್ನು ತಯಾರಿಸಿದ್ದೇವೆ. ಈಗ ಇದು ಸಂಪೂರ್ಣವಾಗಿ ಸಿದ್ಧವಾಗಿದ್ದು, ನಾವು ಇ-ಟೆಕ್ನಾಲಜಿಯನ್ನು ಉದ್ಯಮಿಗಳಿಗೆ ಕೊಡುತ್ತೇವೆ. ಅವರು ಇವುಗಳನ್ನು ತಯಾರು ಮಾಡಿ ಸಾರ್ವಜನಿಕರಿಗೆ ತಲುಪಿಸುತ್ತಾರೆ.

ನಾವು ಇದರ ಬಗ್ಗೆ ಶಿಕ್ಷಣವನ್ನು ಫುಡ್ ಅಂಡ್ ವಾಟರ್ ಪ್ರಾಡಕ್ಟ್ಸ್ ಮುಖಾಂತರ ತಿಳಿಸಿದ್ದು, ವಸ್ತುಗಳು ಸಿದ್ಧವಾಗಿವೆ. ಈ ಸಂಶೋಧನೆಯು ಪ್ಲಾಸ್ಟಿಕ್ ವಾಟರ್ ಬಾಟಲಿಯನ್ನು ತನ್ನೆಡೆಗೆ ಬದಲಿಸಬಹುದು. ಇದು ವಾತಾವರಣಕ್ಕೂ ಬಹಳ ಒಳ್ಳೆಯದು. ಈ ತಂತ್ರಜ್ಞಾನ ಈಗಷ್ಟೇ ತಯಾರಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದೆ. ಪ್ಲಾಸ್ಟಿಕ್ ಸಮಸ್ಯೆ ಪರಿಹಾರ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಜ್ಞಾನಿ ಡಾ. ಜಾನ್ ಸಿ.

ಇದನ್ನೂ ಓದಿ: ಪರಿಸರ ಮತ್ತು ಜೀವ ಸಂಕುಲಕ್ಕೆ ಮಾರಕ ಪ್ಲಾಸ್ಟಿಕ್​.. ಸರ್ವ ವ್ಯಾಪಿಯಾದ ಈ ವಿನಾಶಕಾರಿ ನಿಯಂತ್ರಣಕ್ಕೆ ಬೇಕಿದೆ ತುರ್ತು ಕ್ರಮ

Last Updated : Oct 1, 2023, 8:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.