ETV Bharat / state

ಮೈಸೂರು ಅರಮನೆ ಆವರಣದಲ್ಲಿದೆ ಭುವನೇಶ್ವರಿ ದೇವಾಲಯ: ಇಲ್ಲಿ ನಿತ್ಯವೂ ಕನ್ನಡಾಂಬೆಯ ಆರಾಧನೆ - Bhuvaneshwari temple in Mysore Palace premises

Bhuvaneshwari temple in Mysore Palace premises: ರಾಜ್ಯದಲ್ಲಿ ಅತಿದೊಡ್ಡ ಭುವನೇಶ್ವರಿ ದೇವಾಲಯ ಎನ್ನುವ ಖ್ಯಾತಿ ಈ ದೇವಾಲಯಕ್ಕಿದೆ.

ಕನ್ನಡಾಂಬೆಯ ಆರಾಧನೆ
ಕನ್ನಡಾಂಬೆಯ ಆರಾಧನೆ
author img

By ETV Bharat Karnataka Team

Published : Nov 1, 2023, 5:26 PM IST

Updated : Nov 1, 2023, 7:33 PM IST

ಮೈಸೂರು ಅರಮನೆ ಆವರಣದಲ್ಲಿದೆ ಭುವನೇಶ್ವರಿ ದೇವಾಲಯ

ಮೈಸೂರು: ನವೆಂಬರ್ ತಿಂಗಳಿನಲ್ಲಿ ರಾಜ್ಯಾದ್ಯಂತ ರಾಜ್ಯೋತ್ಸವ ಸಂಭ್ರಮ. ಆದರೆ ಮೈಸೂರು ಅರಮನೆಯ ಆವರಣದಲ್ಲಿ ಮಹಾರಾಜರು ಕಟ್ಟಿಸಿದ ಭುವನೇಶ್ವರಿ ದೇವಾಲಯದಲ್ಲಿ ವರ್ಷಪೂರ್ತಿ ಪೂಜೆ ನಡೆಯುತ್ತದೆ. ಭುವನೇಶ್ವರಿ ತಾಯಿಯನ್ನು ಪ್ರತಿದಿನವೂ ಪೂಜಿಸುವ ದೇವಾಲಯ ಅರಮನೆಯ ಆವರಣದಲ್ಲಿದೆ. ಈ ದೇವಾಲಯದ ನಿರ್ಮಾಣವಾದ ಹಿನ್ನೆಲೆ ಏನು ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

70 ವರ್ಷಗಳ ಹಿಂದೆ ದೇವಾಲಯ ನಿರ್ಮಾಣ: ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆಯ ಆವರಣದಲ್ಲಿ 9 ದೇವಾಲಯಗಳಿದ್ದು, ಅದರಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಾಲಯವು ಒಂದು. ಅದಲ್ಲದೆ ದೇವಾಲಯದ ಆವರಣದಲ್ಲಿ ಬನ್ನಿ ಮರ ಕೂಡ ಇರುವುದು ವಿಶೇಷವಾಗಿದೆ. ಅರಮನೆಯ ಮುಂಭಾಗದ ಬಲರಾಮ ದ್ವಾರಕ್ಕೆ ಹೋಗುವ ಮಾರ್ಗದಲ್ಲಿರುವ ಭುವನೇಶ್ವರಿ ದೇವಾಲಯವನ್ನು ಜಯಚಾಮರಾಜೇಂದ್ರ ಒಡೆಯರ್ ಕಳೆದ 70 ವರ್ಷಗಳ ಹಿಂದೆ ಕಟ್ಟಿಸಿದ್ದರು.

Bhubaneswari Temple is located in the Mysore Palace premises

ದರ್ಬಾರ್ ಹಾಲ್​ನಲ್ಲಿ ನಿಂತು ನೋಡಿದರೆ ಅರಮನೆಯ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಒಡೆಯರ್​ಗೆ ಕಾಣುತ್ತಿದ್ದವು. ಆ ಸಂದರ್ಭದಲ್ಲಿ ಭುವನೇಶ್ವರಿ ದೇವಾಲಯ ಕಾಣುತ್ತಿಲ್ಲ ಎಂದು ಜಯಚಾಮರಾಜೇಂದ್ರ ಒಡೆಯರ್ ಅವರ ತಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಕನಸೊಂದು ಬಿದ್ದಿದ್ದು. ಅದರಂತೆ ಅರಮನೆಯ ಮುಂಭಾಗದಲ್ಲಿ ಭುವನೇಶ್ವರಿ ದೇವಾಲಯ ಕಟ್ಟಿಸಿದರೆ ದಿಗ್ವಿಜಯಕ್ಕೆ ಯಶಸ್ಸು ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಭುವನೇಶ್ವರಿ ದೇವಾಲಯವನ್ನು ಕಟ್ಟಿಸಿದರು ಎಂಬ ಮಾತಿದೆ. ಈ ದೇವಾಲಯದಲ್ಲಿ ಇಂದಿಗೂ ಸಹ ಪ್ರತಿನಿತ್ಯ ವಿಶೇಷ ಪೂಜೆಗಳು ನೆರವೇರುತ್ತವೆ. ಜೊತೆಗೆ ಅರಮನೆಗೆ ಆಗಮಿಸುವ ಪ್ರವಾಸಿಗರು ಈ ದೇವಾಲಯಕ್ಕೆ ಬಂದು ದರ್ಶನ ಪಡೆಯುವುದು ವಿಶೇಷವಾಗಿದೆ‌.

ಮೈಸೂರು ಅರಮನೆ
ಮೈಸೂರು ಅರಮನೆ

ಭುವನೇಶ್ವರಿಗೆ ಬೆಳ್ಳಿ ಕವಚ: ರಾಜ್ಯೋತ್ಸವದ ದಿನ ನವೆಂಬರ್ 1 ರಂದು ಪ್ರತಿವರ್ಷ ಭುವನೇಶ್ವರಿ ದೇವಾಲಯದಲ್ಲಿ ಜಿಲ್ಲಾಡಳಿತದಿಂದ ವಿಶೇಷ ಪೂಜೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಭುವನೇಶ್ವರಿಗೆ ಬೆಳ್ಳಿಯ ಕವಚ ಹಾಕಿ, ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗಿನಿಂದಲೇ ಪಂಚಾಮೃತ ಅಭಿಷೇಕ ಮಾಡಿ, ವಿಶೇಷವಾಗಿ ಅಲಂಕರಿಸಲಾಗಿದೆ. ಇದರ ಜೊತೆಗೆ ಚಾಮುಂಡೇಶ್ವರಿ ವರ್ಧಂತಿ, ಶಿವರಾತ್ರಿ, ಮಹಾಲಯ ಅಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಅಲಂಕಾರದ ಜೊತೆಗೆ ವಿಶೇಷ ಪೂಜೆ ಸಹ ಮಾಡಲಾಗುತ್ತದೆ ಎಂದು ಅರ್ಚಕ ಸೂರ್ಯನಾರಾಯಣ ಶಾಸ್ತ್ರಿ ಈಟಿವಿ ಭಾರತ್​ಗೆ ವಿವರಿಸಿದ್ದಾರೆ.

ಭುವನೇಶ್ವರಿ ದೇವಾಲಯ
ಭುವನೇಶ್ವರಿ ದೇವಾಲಯ

ಈ ದೇವಾಲಯ ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ರಾಜ್ಯದಲ್ಲಿ ಇರುವ ಅತಿ ದೊಡ್ಡ ಭುವನೇಶ್ವರಿ ದೇವಾಲಯ ಎಂಬ ಖ್ಯಾತಿಯನ್ನು ಪಡೆದಿರುವುದು ಇದರ ಮತ್ತೊಂದು ಹೆಗ್ಗಳಿಕೆ.

ಭುವನೇಶ್ವರಿ ಎಂದರೆ ಭೂಮಿ ತಾಯಿ ಎಂಬ ಅರ್ಥ ಬರುವ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಸುಂದರಿ, ಭುವನ ಸುಂದರಿ ಭುವನೇಶ್ವರಿ ತಾಯಿ. ವರ್ಷಪೂರ್ತಿ ಪೂಜೆ ನಡೆಯುವ ಭುವನೇಶ್ವರಿ ದೇವಾಲಯ ಇದಾಗಿದೆ ಎಂಬ ವಿಶೇಷವೂ ಇದೆ.

ಇದನ್ನೂ ಓದಿ : ಕನ್ನಡ ರಾಜ್ಯೋತ್ಸವ: ಘಾಟಿ ಸುಬ್ರಮಣ್ಯಸ್ವಾಮಿಗೆ ಮುತ್ತಿನ ಅಲಂಕಾರ

Last Updated : Nov 1, 2023, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.