ETV Bharat / state

ಬೆಟ್ಟದಪುರ: ವಿಜೃಂಭಣೆಯಿಂದ ನಡೆದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ದೀವಟಿಗೆ ಉತ್ಸವ - ವಿಡಿಯೋ

ದೀವಟಿಗೆ ಉತ್ಸವಕ್ಕೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಪ್ರಸಿದ್ಧವಾಗಿದೆ.

ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ದೀವಟಿಗೆ ಉತ್ಸವ

author img

By ETV Bharat Karnataka Team

Published : Nov 15, 2023, 1:52 PM IST

ಮೈಸೂರು : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಇತಿಹಾಸ ಪ್ರಸಿದ್ಧ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ದೀಪಾವಳಿಯ ದಿನದಂದು ದೀವಟಿಗೆ ಉತ್ಸವ ವಿಶಿಷ್ಟ ರೀತಿಯಲ್ಲಿ ನಡೆದಿದೆ. ಈ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ದೇವರಿಗೆ ಹರಕೆ ಕಟ್ಟಿಕೊಂಡು ದೇವಾಲಯಕ್ಕೆ ಆಗಮಿಸಿ ಪಂಜಿನ ಮೆರವಣಿಗೆ ಮೂಲಕ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ದೀವಟಿಗೆ ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷ.

ಮಹಾಲಯ ಅಮಾವಾಸ್ಯೆ (ಆಯುಧ ಪೂಜೆ) ಸಮಯದಲ್ಲಿ ಹೆಣ್ಣು ನೋಡುವ ಶಾಸ್ತ್ರ, ದೀಪಾವಳಿಯಂದು ನಿಶ್ಚಿತಾರ್ಥ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಭಾರತ ಹುಣ್ಣಿಮೆಯಂದು ಗಿರಿಜಾ ಕಲ್ಯಾಣ ಮಹೋತ್ಸವ ಇಲ್ಲಿನ ಪ್ರಮುಖ ಧಾರ್ಮಿಕ ಕಾರ್ಯಗಳಾಗಿವೆ. ಗಿರಿಜಾ ಕಲ್ಯಾಣಕ್ಕೂ ಪೂರ್ವಭಾವಿಯಾಗಿ ದೀಪಾವಳಿ ಹಬ್ಬದಂದು ಲಗ್ನಪತ್ರಿಕೆ ಬರೆದು ನಿಶ್ಚಿತಾರ್ಥ ನೆರವೇರಿಸಲಾಗುವ ಸಂಪ್ರದಾಯ ಬೆಟ್ಟದಪುರದ ದೇವಾಲಯದಲ್ಲಿದೆ.

ನವೆಂಬರ್ 13 ರಂದು ಭಕ್ತಾದಿಗಳು ಸುಮಾರು 3600 ಮೆಟ್ಟಲುಗಳನ್ನು ಏರುವ ಮೂಲಕ ಬೆಟ್ಟದ ಮೇಲಿರುವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅದೇ ದಿನ ರಾತ್ರಿ ಗ್ರಾಮದ ಮಧ್ಯಭಾಗದಲ್ಲಿರುವ ದೇವಾಲಯದಿಂದ ಬೆಟ್ಟದ ಮೇಲಿರುವ ದೇವಾಲಯಕ್ಕೆ ಬೆಳ್ಳಿ ಬಸಪ್ಪ, ಗಿರಿಜಾದೇವಿ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಯನ್ನು ಕೊಂಡಯ್ಯಲಾಗುತ್ತದೆ. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು ಮುಗಿಸಿದ ನಂತರ ನವೆಂಬರ್ 14ರಂದು (ಮಂಗಳವಾರ) ಬಲಿಪಾಡ್ಯಮಿ ದಿನ ಮುಂಜಾನೆ ದೇವರನ್ನು ಮರಳಿ ಗ್ರಾಮದೊಳಗೆ ತರಲಾಗಿತ್ತು.

ಹಸಿರು ಮಂಟಪಗಳ ಸೇವೆ : ಬೆಟ್ಟದಪುರ ಸೇರಿದಂತೆ ಬೆಟ್ಟವನ್ನು ಸುತ್ತುವರೆದಿರುವ ಪ್ರತಿಯೊಂದು ಗ್ರಾಮಗಳಲ್ಲಿ ಆಕರ್ಷಕ ಹಸಿರು ಮಂಟಪ (ಚಪ್ಪರ)ಗಳನ್ನು ನಿರ್ಮಾಣ ಮಾಡಿ, ಆ ಮಂಟಪದಲ್ಲಿ ಬೆಟ್ಟದಿಂದ ಹೊತ್ತು ತರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿಲಾಗುತ್ತದೆ. ಬಳಿಕ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಾದಿಗಳು ಪ್ರಾರ್ಥಿಸುತ್ತಾರೆ.

ಬೆಟ್ಟದಪುರದಿಂದ ಆರಂಭಗೊಳ್ಳುವ ಈ ಉತ್ಸವ ಸುತ್ತಮುತ್ತಲಿನ ಗ್ರಾಮಗಳಾದ ಬಸವೇಶ್ವರ ಕಾಲೋನಿ, ಬೆಟ್ಟದತುಂಗ, ಮೇಗಲಕೊಪ್ಪಲು ಹಾಗೂ ಕುಡಕೂರು ಗ್ರಾಮಗಳು ಸೇರಿದಂತೆ ಸುಮಾರು 15 ಕಿ.ಮೀ ಉತ್ಸವ ಮೂರ್ತಿಗಳನ್ನು ಉಪ್ಪಾರ ಸಮುದಾಯದವರು ಹೊತ್ತು ಕಾಲ್ನಡಿಗೆಯಲ್ಲಿ ಸಂಚರಿಸಿ ರಾತ್ರಿ ಬೆಟ್ಟದಪುರಕ್ಕೆ ಮರಳುತ್ತದೆ.

ಗ್ರಾಮದ ಬನ್ನಿಮಂಟಪ, ಬೆಟ್ಟದತುಂಗ ಪ್ರಾಚೀನ ಕಾಲದ ವೀರಭದ್ರೇಶ್ವರ ದೇವಾಲಯ, ಕುಡಕೂರು ಗ್ರಾಮದ ಬಸವೇಶ್ವರ ದೇವಾಲಯಗಳ ಸುತ್ತ ನಡೆಸುವ ಪಂಜಿನ ಪ್ರದಕ್ಷಿಣೆ ನೋಡುಗರ ಮನಸೂರೆಗೊಳ್ಳುತ್ತದೆ. ದೇವಾಲಯದ ಸುತ್ತ 3 ಬಾರಿ ಪ್ರದಕ್ಷಿಣೆ ಮಾಡುವ ದೀವಟಿಗೆ ಸೇವೆಯ ಭಕ್ತಾದಿಗಳು ಉಘೇ ಮಲ್ಲಯ್ಯ, ಉಘೇ ಗಿರಿಜಮ್ಮ ಎಂದು ಘೋಷಣೆ ಹಾಕುತ್ತ ಪಂಜಿನ ಬೆಳಕಿನಲ್ಲಿ ನಡೆಯುವ ಉತ್ಸವವನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿರುತ್ತಾರೆ.

ಇಲ್ಲಿ ನಡೆಯುವ ದೀಪಾವಳಿಗೆ ಒಂದು ವಿಶೇಷತೆ ಇದೆ. ಸಿಡಿಲು ಮಲ್ಲಿಕಾರ್ಜುನ ಸ್ವಾಮಿ, ಗಿರಿಜಾದೇವಿ ಹಾಗೂ ಬೆಳ್ಳಿ ಬಸಪ್ಪನ ಪಲ್ಲಕ್ಕಿಯ ಮೆರವಣಿಗೆ, ಜತೆಯಲ್ಲಿ ಬರುವ ದೀವಟಿಗೆಯವರು, ಪ್ರತಿ ಮನೆಯ ಮುಂದೆ ಹಸಿರು ಚಪ್ಪರದ ಕೆಳಗೆ ನಿಲ್ಲಿಸಿ ಪೂಜಿಸುವ ಪರಿ, ದೇವರೊಟ್ಟಿಗೆ ದೇವಸ್ಥಾನ ಸುತ್ತುವ ದೀವಟಿಗೆಯವರ ಜಯಕಾರ, ಇಡೀ ಭಾರತದಲ್ಲೇ ಎಲ್ಲೂ ಕಾಣದ ವಿಶೇಷ ಆಚರಣೆ ಇಲ್ಲಿದೆ.

ಇದನ್ನೂ ಓದಿ : ಕುಂದಾನಗರಿಯಲ್ಲಿ ಎಮ್ಮೆಗಳ ಓಟ.. ವೈಯ್ಯಾರಕ್ಕೆ ಮನಸೋತ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.