ಮೈಸೂರು: ಬೈಕ್ಗಳಿಗೆ ಜೋರಾಗಿ ಸೌಂಡ್ ಬರುವಂತಹ ಸೈಲೆನ್ಸರ್ ಪೈಪ್ಗಳನ್ನು ಅಳವಡಿಸಿಕೊಂಡು, ಓಡಾಡಿಸುತ್ತಿದ್ದ ಬೈಕ್ಗಳ ಸೈಲೆನ್ಸರ್ ಪೈಪ್ಗಳನ್ನು ಹುಣಸೂರು ಪೊಲೀಸರು ವಶಪಡಿಸಿಕೊಂಡು ನಾಶಮಾಡಿದ್ದಾರೆ.
ಅವೈಜ್ಞಾನಿಕವಾಗಿ ಬೈಕ್ಗಳಿಗೆ ಜೋರಾಗಿ ಸೌಂಡ್ ಬರುವಂತಹ ಸೈಲೆನ್ಸರ್ ಪೈಪ್ಗಳನ್ನು ಅಳವಡಿಸಿಕೊಂಡು ಓಡಾಡಿಸುತ್ತಿದ್ದ 40 ಸೈಲೆನ್ಸರ್ ಪೈಪ್ಗಳನ್ನು, ಹುಣಸೂರು ಪಟ್ಟಣ ಪೊಲೀಸರು ಪೊಲೀಸ್ ಠಾಣೆಯ ಆವರಣದಲ್ಲೇ ಜೆಸಿಬಿ ಯಂತ್ರದ ಮೂಲಕ ಪೈಪ್ಗಳನ್ನು ತೆಗೆದುಹಾಕಿದ್ದಾರೆ.
ಇನ್ನು ಮುಂದೆ ಇವುಗಳನ್ನು ಉಪಯೋಗಿಸದಂತೆ ನಾಶಪಡಿಸಲಾಗಿದ್ದು, ಬೇರೆಯವರು ಇಂತಹ ಸೈಲೆನ್ಸರ್ ಪೈಪ್ಗಳನ್ನು ಉಪಯೋಗಿಸಿದರೆ ಇದೇ ಗತಿಯಾಗುವುದು ಎಂದು ಎಸ್.ಐ. ಮಹೇಶ್ ಎಚ್ಚರಿಸಿದರು.