ಮೈಸೂರು: ಹೊಲದಲ್ಲಿ ದನ ಮೇಯಿಸುತ್ತಿದ್ದ ರೈತರ ಮೇಲೆ ಹಠಾತ್ತಾನೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಎಚ್ ಡಿ.ಕೋಟೆ ತಾಲೂಕಿನ ಹೊಸತೊರವಳ್ಳಿ ಹಾಗೂ ಬೆಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಜ್ಜೇನು ದಾಳಿಗೆ ಒಬ್ಬ ರೈತ ಸಾವನ್ನಪ್ಪಿದ್ದು, ಮತ್ತಿಬ್ಬರು ನಿತ್ರಾಣಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಚ್ ಡಿ. ಕೋಟೆ ತಾಲೂಕಿನ ಹೊಸತೊರವಳ್ಳಿ ಮತ್ತು ಬೆಳಗನಹಳ್ಳಿ ಸಮೀಪದಲ್ಲಿ, ದನ ಮೇಯಿಸುತ್ತಿರುವ ರೈತರ ಮೇಲೆ ಹೆಜ್ಜೇನು ಹುಳುಗಳ ಹಿಂಡು ಹಠಾತ್ತನೆ ದಾಳಿ ನಡೆಸಿವೆ. ಹೆಜ್ಜೇನು ಹುಳುಗಳ ಮೊದಲು ಚಿಕ್ಕಮಾಲೇಗೌಡನ (65) ಮೇಲೆ, ನಂತರ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಬೀರೇಗೌಡ ಮತ್ತು ಶಂಕರನಾಯ್ಕ ಎಂಬ ರೈತರ ಮೇಲೆ ದಾಳಿ ನಡೆಸಿವೆ. ಜೇನುಗಳ ದಾಳಿಯಿಂದ ಅಸ್ವಸ್ತಗೊಂಡಿದ್ದವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಚಾಮರಾಜಗರದಲ್ಲಿ ಪ್ರತಿಭಟನಾಕಾರರ ಮೇಲೆ ಜೇನು ದಾಳಿ.. ಓಟಕಿತ್ತ ಜನ
ಮಾರ್ಗ ಮಧ್ಯೆ ಒಬ್ಬ ರೈತ ಸಾವು : ಹೆಜ್ಜೇನು ದಾಳಿಗೆ ಒಳಗಾಗಿದ್ದ ಮೂವರು ರೈತರನ್ನು ಆಸ್ಪತ್ರೆಗೆ ಸೇರಿಸಲು ಕರೆದುಕೊಂಡು ಹೋಗುವಾಗ, ಮಾರ್ಗ ಮಧ್ಯದಲ್ಲಿ, ಚಿಕ್ಕಮಾಲೇಗೌಡ (65) ಎಂಬ ರೈತ ಹೆಜ್ಜೇನು ದಾಳಿಗೆ ತೀವ್ರ ನಿತ್ರಾಣಗೊಂಡು ಸಾವನ್ನಪ್ಪಿದರೇ, ಇನ್ನುಳಿದ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹೆಜ್ಜೇನು ಹಿಂಡಿನ ದಾಳಿಯಿಂದ ಹೊಸತೊರವಳ್ಳಿ, ಬೆಳಗನಹಳ್ಳಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಜನರು ಜಮೀನಿನ ಕಡೆ ಹೋಗಲು ಭಯಪಡುತ್ತಿದ್ದಾರೆ.
ಇದನ್ನೂ ಓದಿ:ಕೋವಿಡ್ ಕೇಸ್ ಮತ್ತೆ ಹೆಚ್ಚಳ: ಕಳೆದ 24 ಗಂಟೆಯಲ್ಲಿ 5,357 ಹೊಸ ಪ್ರಕರಣಗಳು ದಾಖಲು
ಮಿನಿ ವಿಧಾನಸೌಧದಲ್ಲೂ ನಡೆದಿತ್ತು ಹೆಜ್ಜೇನು ದಾಳಿ: ಕಳೆದ ವರ್ಷದ ಡಿಸೆಂಬರ್ 16 ರಂದು ಮೈಸೂರಿನ ಹೆಚ್ ಡಿ ಕೋಟೆಯ ಮಿನಿ ವಿಧಾನಸೌಧದಲ್ಲಿ ಹೆಜ್ಜೇನು ದಾಳಿ ನಡೆಸಿತ್ತು. ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು. ಅವರೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಹೆಜ್ಜೇನು ದಾಳಿಗೆ ತುಮಕೂರಲ್ಲಿ ಓರ್ವ ಸಾವನ್ನಪ್ಪಿದ್ದ ಘಟನೆ ನಡೆದಿತ್ತು: ಇನ್ನು ಇದಕ್ಕೂ ಮುನ್ನ 2022ರ ಮೇ ತಿಂಗಳಿನಲ್ಲಿ ಎಸ್ಸಾರ್ ಪೆಟ್ರೋಲ್ ಬಂಕ್ ಸಮೀಪ ಒಂದು ಆಲದ ಮರದಲ್ಲಿ 4 ಹೆಜ್ಜೇನಿನ ಗೂಡುಗಳಿದ್ದವು. ಆ ಗೂಡುಗಳಿಗೆ ಯಾರೋ ಕಲ್ಲು ಎಸೆದಿದ್ದರಿಂದಲೋ ಏನೋ ಏಕಾ ಏಕಿ ಇವು ಜನರ ಮೇಲೆ ದಾಳಿ ನಡೆಸಿದ್ದವು. ಈ ಪರಿಣಾಮವಾಗಿ ಹುಲವಂಗಲ ಗ್ರಾಮ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಕೃಷ್ಣಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಷ್ಟೇ ಅಲ್ಲ ಈ ಹೆಜ್ಜೇನುಗಳ ದಾಳಿಯಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನೆಲ್ಲ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಇದರಿಂದ ಇಲ್ಲಿನ ಜನ ಭೀತಿಗೊಂಡಿದ್ದರು.
ಇದನ್ನೂ ಓದಿ: ಪ್ರವಾಸಿಗರ ಮೇಲೆ ಮುಗಿಬಿದ್ದ ಜೇನುನೊಣಗಳು; ಇಬ್ಬರು ಸಾವು, ಐವರಿಗೆ ಗಾಯ
ಇದನ್ನೂ ಓದಿ: ಅಯೋಧ್ಯೆ ಶ್ರೀರಾಮನ ಸನ್ನಿಧಿಯಲ್ಲಿ ಮಹಾ ಸಿಎಂ ಶಿಂಧೆ, ಡಿಸಿಎಂ ಫಡ್ನವೀಸ್: ವಿಡಿಯೋ