ಮೈಸೂರು: ನಮ್ಮಲ್ಲಿ ಹಾಸಿಗೆ ಮತ್ತು ವೆಂಟಿಲೇಟರ್ ಫುಲ್ ಆಗಿದ್ದಾವೆ ಎಂದು ಕೆ.ಆರ್.ಆಸ್ಪತ್ರೆ ಮುಂದೆ ಬೋರ್ಡ್ ಹಾಕಿರುವುದರಿಂದ ಮೈಸೂರಿನಲ್ಲಿ ಕೊರೊನಾ ನಿಯಂತ್ರಣ ತಪ್ಪುತ್ತಿದೆಯೇ ಎಂಬ ಆತಂಕ ಎದುರಾಗಿದೆ.
ಕೊರೊನಾ ರೋಗಿಗಳಿಂದ ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಭರ್ತಿ ಆಗ್ತಿವೆ. ಮೈಸೂರು ಜಿಲ್ಲಾಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೇ ರೋಗಿಗಳ ಪರದಾಟ ಶುರುವಾಗಿದೆ. ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ 405 ಮಂದಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 70 ವೆಂಟಿಲೇಟರ್‌ಗಳು ತುಂಬಿವೆ. ಜಿಲ್ಲಾಸ್ಪತ್ರೆ, ಕೆಆರ್.ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಸೇರಿ 54 ICU ಸಹ ಫುಲ್ ಆಗಿವೆ ಎಂಬ ಮಾಹಿತಿ ದೊರೆತಿದೆ.
ಬೆಂಗಳೂರಿನಿಂದ ಕೊರೊನಾ ಸೋಂಕಿತರು ಬೆಡ್ಗಾಗಿ ಮೈಸೂರಿಗೆ ಬರ್ತಿದ್ದಾರೆ ಎಂಬ ಆತಂಕ ಈಗ ಜನರಲ್ಲಿದೆ.