ಮೈಸೂರು: ಕೋವಿಡ್ನಿಂದ ನರಳುತ್ತಿರುವ ಜನರ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು, ಫೇಸ್ಬುಕ್ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ, ಫೇಕ್ ರಿಕ್ವೆಸ್ಟ್ ಕಳಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಘಟನೆ ಇತ್ತೀಚೆಗೆ ತೀರಾ ಹೆಚ್ಚಾಗಿದೆ.
ಹೌದು, ಇಂತಹುದೇ ಘಟನೆ ಮೈಸೂರಿನಲ್ಲಿ ನಡೆದಿದೆ. ಇಟ್ಟಿಗೆ ಗೂಡಿನ ನಿವಾಸಿ ಪ್ರಕಾಶ್ ಎಂಬುವವರ ನಕಲಿ ಅಕೌಂಟ್ ಸೃಷ್ಟಿಸಿ, ಪ್ರಕಾಶ್ ಅವರ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಫೇಕ್ ರಿಕ್ವೆಸ್ಟ್ ಕಳುಹಿಸಿ, ಅಕ್ಸೆಪ್ಟ್ ಮಾಡಿದ್ರೆ ಚಾಟಿಂಗ್ ಶುರು ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಆಸ್ಪತ್ರೆಯಲ್ಲಿದ್ದೇನೆ ತುರ್ತಾಗಿ ಹಣ ಬೇಕಿದೆ ಎಂದು ಒತ್ತಡ ಹಾಕುತ್ತಾರೆ. ನಕಲಿ ಅಕೌಂಟ್ ಬಗ್ಗೆ ಎಚ್ಚೆತ್ತ ಪ್ರಕಾಶ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಇಮೇಲ್ ಮೂಲಕ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ ಖಾತೆಯ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.
ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಳಿಕ ಚಾಟಿಂಗ್ ಮಾಡುವ ಸೈಬರ್ ಖದೀಮರು, ತುರ್ತಾಗಿ ಹಣದ ಅಗತ್ಯವಿದೆ ಎಂದು ಗೂಗಲ್ ಪೇ ಅಥವಾ ಪೋನ್ ಪೇಗೆ ಹಣ ಹಾಕುವಂತೆ ಬೇಡಿಕೆ ಇಡುತ್ತಾರೆ. ಗಣ್ಯರು, ಶ್ರೀಮಂತರು, ಸರ್ಕಾರಿ ಅಧಿಕಾರಿಗಳೇ ಈ ವಂಚಕರ ಗುರಿಯಾಗಿದ್ದಾರೆ. ಅಸಲಿ ಖಾತೆಯನ್ನೇ ಹೋಲುವಂತೆ ಪ್ರೋಫೈಲ್ ಫೋಟೋ ಬಳಸಿ ದೋಖಾ ಮಾಡುತ್ತಿದ್ದಾರೆ. ವಿಚಾರಿಸದೆ ಹಣ ಹಾಕಿದ್ರೆ, ಹಣ ಸೈಬರ್ ಕಳ್ಳರ ಪಾಲಾಗುತ್ತದೆ ಎಚ್ಚರ.
ಇದನ್ನೂ ಓದಿ: ನಾನು ಸಿಎಂ ಆಗ್ಬೇಕು, ಚುನಾವಣೆಗೆ ಸ್ಪರ್ಧಿಸಿದ್ರೆ ಗೆಲ್ಲಿಸ್ತೀರಾ?: ಜನರಿಗೆ ನಟ ಉಪೇಂದ್ರ ಪ್ರಶ್ನೆ