ETV Bharat / state

ಮೈಸೂರಿನ ಭಾಭಾ ಅಣು ಸಂಶೋಧನಾ ಕೇಂದ್ರದ ಯುವ ವಿಜ್ಞಾನಿ ದಿಢೀರ್ ನಾಪತ್ತೆ!

ಮೈಸೂರಿನಿಂದ 15 ಕಿ.ಮೀ ದೂರದಲ್ಲಿರುವ ಬಾರ್ಕ್‌ನಲ್ಲಿ ಕೆಲಸ ಪಡೆದ ನಂತರ ಸಹಾಯಕ ವಿಜ್ಞಾನಿ ಅಭಿಷೇಕ್​ ರೆಡ್ಡಿ ಒಂದು ವರ್ಷದ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಿಂದ ಮೈಸೂರಿಗೆ ತೆರಳಿದ್ದರು. ಅವರು ಖಿನ್ನತೆ ಮತ್ತು ಮೈಗ್ರೇನ್‌ನಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ. ಅವರು ಯಾರಿಗೂ ಮಾಹಿತಿ ನೀಡದೆ ಹೊರಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Abhisheka Reddy
ಅಭಿಷೇಕಾ ರೆಡ್ಡಿ
author img

By

Published : Oct 10, 2020, 5:42 PM IST

Updated : Oct 10, 2020, 6:02 PM IST

ಮೈಸೂರು: ಮೈಸೂರು ಸಮೀಪದ ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಅಪರೂಪದ ವಸ್ತುಗಳ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ವಿಜ್ಞಾನಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹಾಯಕ ವೈಜ್ಞಾನಿಕರಾಗಿದ್ದ ಅಭಿಷೇಕ್ ರೆಡ್ಡಿ ಗುಲ್ಲಾ (24) ಮೈಸೂರಿನ ಇಲವಾಲದಲ್ಲಿರುವ ಕಾವೇರಿ ಲೇಔಟ್​ನಲ್ಲಿ (ಹೊಸ ಜನತಾ ಕಾಲೋನಿ) ವಾಸವಾಗಿದ್ದರು.

ಮೈಸೂರಿನಿಂದ 15 ಕಿ.ಮೀ ದೂರದಲ್ಲಿರುವ ಬಾರ್ಕ್‌ನಲ್ಲಿ ಕೆಲಸ ಪಡೆದ ನಂತರ ರೆಡ್ಡಿ ಒಂದು ವರ್ಷದ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಿಂದ ಮೈಸೂರಿಗೆ ಬಂದಿದ್ದರು. ಅವರು ಖಿನ್ನತೆ ಮತ್ತು ಮೈಗ್ರೇನ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ, ಅಭಿಷೇಕ್​ ರೆಡ್ಡಿ ಯಾರಿಗೂ ತಿಳಿಸದೆ ಹೊರಟು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂದೆರಡು ತಿಂಗಳ ಹಿಂದೆ ಹೆತ್ತವರ ಮರಣದ ನಂತರ ರೆಡ್ಡಿ ಒಬ್ಬಂಟಿಯಾಗಿದ್ದಾರೆ ಎಂದು ಇಲವಾಲ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಎನ್‌. ಎಚ್. ಯೋಗಾನಂದ ತಿಳಿಸಿದ್ದಾರೆ.

ಅಕ್ಟೋಬರ್ 6ರ ಮಧ್ಯಾಹ್ನ ರೆಡ್ಡಿ, ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯಿಂದ ಹೊರಹೋಗುವುದನ್ನು ಅವರ ನೆರೆಹೊರೆಯವರು ಕೊನೆಯದಾಗಿ ನೋಡಿದ್ದರು. ಈ ಬಳಿಕ ಅವರು ಮತ್ತೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Oct 10, 2020, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.