ಮೈಸೂರು: ಕೋವಿಡ್-19 ಪ್ರಕರಣಗಳನ್ನು ನಿಯಂತ್ರಿಸಲು, ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜುಲೈ 5 ರಿಂದ ಆಗಸ್ಟ್ವರೆಗೆ ಪ್ರತೀ ಭಾನುವಾರ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ ಆದೇಶ ಹೊರಡಿಸಿದ್ದಾರೆ.
ಸಿಎಲ್-2, ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್ -8, ಸಿಎಲ್-9, ಸಿಎಲ್-14, ಆರ್ ವಿಬಿ, ಮೈಕ್ರೊಬ್ರಿವರಿ, ವೈನ್ ಬುಟಿಕ್, ವೈನ್ ಟಾವರ್ನ್, ಕೆಎಸ್ಬಿಎಸ್ಎಲ್ ಡಿಪೋಗಳು ಸಂಪೂರ್ಣವಾಗಿ ಮುಚ್ಚಲು ಹಾಗೂ ಮದ್ಯ ಮಾರಾಟ, ಸಾಗಾಣಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಾದ್ಯಂತ ಸಂಜೆ 6 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ರಿಂದ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮುಚ್ಚತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.