ಮೈಸೂರು: ಪ್ರಧಾನಿ ಮೋದಿ ಅವರು ಕಲಾವಿದರಿಗಿಂತ ದೊಡ್ಡ ಕಲಾವಿದರು. ಕೊರೊನಾದಿಂದ ಮೃತಪಟ್ಟವರಿಗೆ ಭಾವನಾತ್ಮಕವಾಗಿ ಸಂತಾಪ ಸೂಚಿಸಿ ಕಲಾವಿದರನ್ನ ಮೀರಿಸಿದರು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವ್ಯಂಗ್ಯವಾಡಿದ್ದಾರೆ.
ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಭೀಕರವಾಗಿರುತ್ತದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದರು. ಆದರೆ, ಪ್ರಧಾನಿ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಶಾ ಪಶ್ಚಿಮ ಬಂಗಾಳ ಚುನಾವಣೆ ಗೆಲ್ಲಬೇಕು ಎಂಬ ಕಾರಣಕ್ಕೆ ವಿಜೃಂಭಿಸಿ ನಿರ್ಲಕ್ಷ್ಯ ಮಾಡಿದರು. ಈಗ ಕಲಾವಿದರನ್ನು ಮೀರಿಸುವಂತೆ ಕಣ್ಣೀರು ಸುರಿಸಿದ್ದಾರೆ. ಮುಂದೆ ಕೊರೊನಾ ಮೂರನೇ ಅಲೆ ಬರುತ್ತೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಆದರೆ, ಪ್ರಧಾನಿ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆ ಕಡೆಗೆ ಗಮನ ಹರಿಸುತ್ತಿದ್ದಾರೆ. ಈ ಸಂಬಂಧ ಪ್ರಧಾನಿಗೆ ಪತ್ರ ಬರೆಯುತ್ತೇನೆ. ಜನರ ಜೀವ ಹಾಗೂ ಜೀವನ ಮುಖ್ಯವಾಗಿದೆ. ಕೊರೊನಾ ಮೂರನೇ ಅಲೆ ತಡೆಯಲು ಸರ್ಕಾರ ಸಜ್ಜಾಗಬೇಕು ಎಂದಿದ್ದಾರೆ.
ಓದಿ:ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ ಎಂದ್ರು ಅರುಣ್ ಸಿಂಗ್...No Change ಅಂದ್ರು ಕಟೀಲ್