ETV Bharat / state

ಗಣರಾಜ್ಯೋತ್ಸವದಂದು ನಡೆದ ಗಲಭೆಗೆ 'ಮೋ-ಶಾ' ಕಾರಣ : ಬಡಗಲಪುರ ನಾಗೇಂದ್ರ - ರೈತರ ಹೋರಾಟ

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅಂತಹ ಸಾವಿರಾರು ಜನ ಬಂದರು ರೈತರ ಹೋರಾಟ ನಿಲ್ಲುವುದಿಲ್ಲ. ನಮ್ಮ ಹೋರಾಟ ಅಹಿಂಸಾತ್ಮಕ ಹಾಗೂ ಶಾಂತಿಯುತವಾಗಿದೆ. ಇದನ್ನು ಕೆಲ ಕಿಡಿಗೇಡಿಗಳು ಕದಡಿದ್ದಾರೆ. ಇದರಿಂದ ನಮ್ಮ ಹೋರಾಟ ಮತ್ತಷ್ಟು ಬಲಿಷ್ಠವಾಗಲಿದೆ..

asas
ಬಡಗಲಪುರ ನಾಗೇಂದ್ರ ಹೇಳಿಕೆ
author img

By

Published : Jan 29, 2021, 3:17 PM IST

Updated : Jan 29, 2021, 4:53 PM IST

ಮೈಸೂರು : ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ನಡೆದ ಗಲಭೆಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇರ ಕಾರಣ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದ್ದಾರೆ.

ಬಡಗಲಪುರ ನಾಗೇಂದ್ರ ಹೇಳಿಕೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪುಕೋಟೆಯಲ್ಲಿ ರೈತರು ನುಗ್ಗಲು ಕೇಂದ್ರ ಸರ್ಕಾರದ ವೈಫಲ್ಯ ಕಾರಣ. ಸಿಖ್ ಧ್ವಜ ಹಾರಿಸಿದ್ದ ಪಂಜಾಬ್ ನಟ ದೀಪ್ ಸಿಧು ಬಿಜೆಪಿ ಕಾರ್ಯಕರ್ತ. ಆತನ ಮೇಲೆ ಕ್ರಮಕೈಗೊಳ್ಳಲಿ. ಈತನಿಗೆ ಪ್ರತಿಭಟನೆಗೆ ಭಾಗವಹಿಸದಂತೆ ಹೇಳಿದರೂ ಸಹ ಭಾಗವಹಿಸಿದ್ದಾನೆ.

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅಂತಹ ಸಾವಿರಾರು ಜನ ಬಂದರು ರೈತರ ಹೋರಾಟ ನಿಲ್ಲುವುದಿಲ್ಲ. ನಮ್ಮ ಹೋರಾಟ ಅಹಿಂಸಾತ್ಮಕ ಹಾಗೂ ಶಾಂತಿಯುತವಾಗಿದೆ. ಇದನ್ನು ಕೆಲ ಕಿಡಿಗೇಡಿಗಳು ಕದಡಿದ್ದಾರೆ. ಇದರಿಂದ ನಮ್ಮ ಹೋರಾಟ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಎಚ್ಚರಿಕೆ ನೀಡಿದರು.

Last Updated : Jan 29, 2021, 4:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.