ETV Bharat / state

ಶಾದಿ ಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯಗೆ ದೌರ್ಭಾಗ್ಯ ಬಂತು: ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ

2023 ರ ಬಜೆಟ್ ಜನಪರ ಬಜೆಟ್ ಆಗಲಿದೆ - ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ - ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Jan 27, 2023, 3:52 PM IST

ಶಾದಿ ಭಾಗ್ಯದ ಕುರಿತ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ

ಮೈಸೂರು : ನಾವು ಅಧಿಕಾರಕ್ಕೆ ಬಂದರೆ ಶಾದಿ ಭಾಗ್ಯವನ್ನ ಪುನಃ ತರುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾದಿ ಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯ ಅವರಿಗೆ ದೌರ್ಭಾಗ್ಯ ಬಂದಿದ್ದು, ಇದನ್ನ ಮತ್ತೆ ಮುಂದುವರೆಸುತ್ತೇನೆ ಎಂದರೆ, ಪಕ್ಷಕ್ಕೂ ದೌರ್ಭಾಗ್ಯ ಬರಲಿದೆ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದರು.

ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ, ಮಾಧ್ಯಮಗಳ ಜೊತೆ ಮಾತನಾಡಿ, 2023 ರ ಬಜೆಟ್ ಜನಪರ ಬಜೆಟ್ ಆಗಲಿದ್ದು, ಮೈಸೂರು ಸೇರಿದಂತೆ ಎಲ್ಲರಿಗೂ ಉತ್ತಮ ಬಜೆಟ್ ನಿರೀಕ್ಷೆ ಮಾಡಬಹುದು ಎಂದರು. ನಾವು ಅಧಿಕಾರಕ್ಕೆ ಬಂದರೆ ಕೊಟ್ಟ ಭರವಸೆಗಳನ್ನ ಈಡೇರಿಸದಿದ್ದರೆ, ರಾಜಕೀಯ ಸನ್ಯಾಸತ್ವ ಮಾಡುತ್ತೇವೆ ಎಂಬ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು, ತಮ್ಮ ಮನಸ್ಸಿನಲ್ಲಿ ಇರುವ ಮಾತುಗಳನ್ನ ಹೊರಗೆ ಹೇಳಿದ್ದಾರೆ.

ನಾವೆಂದೂ ಸನ್ಯಾಸತ್ವದ ಮಾತು ಆಡಿಲ್ಲ. ಈ ಮಾತನ್ನ ಇವರೇ ಪದೇ ಪದೆ ಮಾತನಾಡುತ್ತಿದ್ದಾರೆ. ಅದು ಅವರ ಮನಸ್ಸಿನ ಕನ್ನಡಿ ಆಗಿದೆ. ಇನ್ನು ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಶಾದಿ ಭಾಗ್ಯ ಮುಂದುವರೆಸುತ್ತೇವೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಶಾದಿ ಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯನವರಿಗೆ ದೌರ್ಭಾಗ್ಯ ಬಂತು. ಅದನ್ನ ಮತ್ತೆ ಮುಂದುವರಿಸುತ್ತಿರುವ, ಮಾತನಾಡುತ್ತಿರುವ ಇವರಿಂದ ಪಕ್ಷಕ್ಕೂ ದೌರ್ಭಾಗ್ಯ ಬರಲಿದೆ ಎಂದರು.

ಕಾಡುಪ್ರಾಣಿಗಳ ಸೆರೆಗೆ ಟಾಸ್ಕ್ ಫೋರ್ಸ್ ರಚನೆ : ಟಾಸ್ಕ್ ಫೋರ್ಸ್ ತಂಡ ಚಿರತೆಯನ್ನ ಈಗಾಗಲೇ ಮೈಸೂರಿನಲ್ಲಿ ಸೆರೆ ಹಿಡಿದಿದ್ದಾರೆ. ಹಾಸನ ಸೇರಿದಂತೆ ಬೇರೆ ಕಡೆಯೂ ಈ ಸಮಸ್ಯೆ ಇದೆ. ಟಾಸ್ಕ್ ಫೋರ್ಸ್ ನಿರಂತರವಾಗಿ ಇರಲಿದ್ದು, ಚಿರತೆಯ ಜೊತೆಗೆ ಆನೆ ಸೆರೆಗೂ ಖಾಯಂ ಟಾಸ್ಕ್ ಫೋರ್ಸ್ ರಚನೆಯನ್ನು ಮಾಡುತ್ತೇವೆ. ಇದಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನ ಸರ್ಕಾರ ಮಾಡುತ್ತದೆ. ಮುಖ್ಯವಾಗಿ ಅರಣ್ಯದಂಚಿನಲ್ಲಿ ಇರುವ ಜನರಿಗೆ ಅವಶ್ಯಕವಾದ ಧೈರ್ಯವನ್ನ ಈ ಟಾಸ್ಕ್ ಪೋರ್ಸ್ ನೀಡಲಿದ್ದು, ಸಾಮಾನ್ಯವಾಗಿ ಕಾಡಂಚಿನ ಜನರು ಸಂಜೆ ಮನೆಯಿಂದ ಹೊರಬರದಂತೆ ತಿಳಿಸಬೇಕು ಎಂದು ಸೂಚನೆ ನೀಡಿದ್ದು, ಈ ಟಾಸ್ಕ್ ಫೋರ್ಸ್​ಗೆ ಸರ್ಕಾರ ಸಂಪೂರ್ಣ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡ್ಯದಲ್ಲಿ ಅಶೋಕ್​ಗೆ ವಿರೋಧ ಇಲ್ಲ: ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಸಚಿವ ಆರ್. ಅಶೋಕ್​ಗೆ ಗೋ ಬ್ಯಾಕ್ ಪೋಸ್ಟರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು. ಮಂಡ್ಯದಲ್ಲಿ ಆರ್. ಅಶೋಕ್​ಗೆ ಯಾವುದೇ ವಿರೋಧ ಇಲ್ಲ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಯಾರೋ 10 ಜನ ಪೋಸ್ಟರ್ ಹಾಕಿದರೆ ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ, ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಚುನಾವಣೆಗೆ ನಮ್ಮದು ವಿಭಿನ್ನ ತಂತ್ರಗಾರಿಕೆ : ಈಗಾಗಲೇ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಕಾಂಗ್ರೆಸ್ ಸಹ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಆದರೆ, ಬಿಜೆಪಿ ಚುನಾವಣೆ ಗೆಲ್ಲಲು ವಿಭಿನ್ನ ತಂತ್ರಗಾರಿಕೆ ಮಾಡುತ್ತೇವೆ. ಯಾರನ್ನೂ ಅನುಸರಿಸುವುದಿಲ್ಲ. ಕಾಲ ಬಂದಾಗ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಸಿ ಎಂ ಹೇಳಿದರು.

ಮುಸ್ಲಿಮರ ಜೊತೆ ಸೌಹಾರ್ದಯುತವಾಗಿರಿ ಎಂಬ ಪ್ರಧಾನಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ಹೇಳಿಕೆಯನ್ನು ಓಲೈಕೆ ಎಂದುಕೊಳ್ಳಬೇಕಾಗಿಲ್ಲ. ದೇಶವನ್ನ ಮುನ್ನಡೆಸುವಾಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂಬುದು ಪ್ರಧಾನಿಯವರ ಮಾತಿನ ಅರ್ಥ. ನಮ್ಮ ದೇಶದಲ್ಲಿ ಮುಸ್ಲಿಂಮರಿಗೆ ಶಿಕ್ಷಣದ ಕೊರತೆ ಮತ್ತು ಬಡತನ ಇದೆ. ಅವರನ್ನ ಮುಖ್ಯವಾಹಿನಿಗೆ ತರಬೇಕು ಎಂಬುದು ಪ್ರಧಾನಿಯವರ ಮಾತಿನ ಅರ್ಥ ಎಂದು ಮುಖ್ಯಮಂತ್ರಿಯವರು ಹೇಳಿದರು.

ಓದಿ: ಎಸ್‌. ಎಂ ಕೃಷ್ಣಗೆ ಪದ್ಮವಿಭೂಷಣ ಪ್ರಶಸ್ತಿ: ಸಿಎಂ ಬೊಮ್ಮಾಯಿ, ಸಚಿವರಿಂದ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.