ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ಶರನ್ನವರಾತ್ರಿಯ 9ನೇ ದಿನವಾದ ಇಂದು ಅರಮನೆಯ ಸವಾರಿ ತೊಟ್ಟಿಯಲ್ಲಿ ಆಯುಧ ಪೂಜೆ ನಡೆಯಿತು,
ಆಯುಧ ಪೂಜೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಅರಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಯಿತು. ಬೆಳಿಗ್ಗೆ 10:15 ಕ್ಕೆ ಸವಾರಿ ತೊಟ್ಟಿಗೆ ಆಗಮಿಸಿದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಟ್ಟದ ಆನೆ, ಕುದುರೆ, ಒಂಟೆ ಹಾಗೂ ಹಸುವಿಗೆ ಪುಷ್ಪಾರ್ಚನೆ ಮಾಡಿ ಮಹಾ ಮಂಗಳಾರತಿ ಮಾಡಿದರು. ಇದೇ ಸಂದರ್ಭದಲ್ಲಿ ತಾವು ಬಳಸುವ ಐಷಾರಾಮಿ ಕಾರುಗಳಿಗೂ ಪೂಜೆ ನೇರವೇರಿಸಿದರು.
ಆಯುಧ ಪೂಜೆ ಬಳಿಕ ವಂದನೆ ಸ್ವೀಕರಿಸಿ ಸರಳ ಮತ್ತು ಸಾಂಪ್ರದಾಯಿಕ ಆಯುಧ ಪೂಜೆ ಪೂರ್ಣಗೊಳಿಸಿದರು. ರಾಜ ಪೋಷಾಕಿನಲ್ಲಿ ಮಹಾರಾಜ ಯದುವೀರ್ ವಿರಾಜಮಾನರಾಗಿದ್ದರು.