ಮೈಸೂರು: ಸಾಂಸ್ಕೃತಿಕ ನಗರಿಯ ಪೌರ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 20 ರಂದು ನೇರ ಸಂವಾದದಲ್ಲಿ ಮಾತನಾಡಲಿದ್ದಾರೆ.
ಆಗಸ್ಟ್ 20 ರಂದು ಕೇಂದ್ರ ಸರ್ಕಾರದ ಸ್ವಚ್ಛ ಸರ್ವೆಕ್ಷಣ್ ನಿಂದ ಸ್ವಚ್ಛ ನಗರಿ ಪ್ರಶಸ್ತಿಯು ಆಗಸ್ಟ್ 20 ರಂದು ಪ್ರಕಟವಾಗಲಿದ್ದು , ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಲು ಸಿದ್ದತೆ ಮಾಡಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಈಗಾಗಲೇ 2014-15 ಮತ್ತು 2015-16 ರಲ್ಲಿ 2 ಬಾರಿ ದೇಶದಲ್ಲೆ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿರುವ ಮೈಸೂರು, ಮೂರನೇ ಬಾರಿ ಸ್ವಚ್ಛ ನಗರಿ ಕಿರೀಟ ಪಡೆಯುವ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ.