ETV Bharat / state

ಕೆ ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಆಸ್ತಿ ವಿವರ ಇಂತಿದೆ - ಸಿದ್ದರಾಮಯ್ಯನವರ ಆಸ್ತಿ ವಿವರ

ಕೃಷ್ಣರಾಜ ಕ್ಷೇತ್ರದಿಂದ ವಿಧಾಸಭಾ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮತ್ತು ಜೆಡಿಎಸ್​ ಅಭ್ಯರ್ಥಿ ಸಾ ರಾ ಮಹೇಶ್ ಅವರ ಆಸ್ತಿ ವಿವರ ಹೀಗಿದೆ ನೋಡಿ.

srivastav
ಬಿಜೆಪಿ ಅಭ್ಯರ್ಥಿ ಶ್ರೀವತ್ಸ
author img

By

Published : Apr 21, 2023, 8:35 AM IST

ಮೈಸೂರು: ಕೃಷ್ಣರಾಜ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಟಿ ಎಸ್ ಶ್ರೀವತ್ಸ ಅವರ ಆಸ್ತಿಯ ಮೌಲ್ಯ ಅರ್ಧ ಕೋಟಿಗಿಂತಲ್ಲೂ ಕಡಿಮೆಯೇ ಇದೆ. 36.89 ಲಕ್ಷ ರೂ. ಚರಾಸ್ತಿ ಮತ್ತು 12 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದು, 1.35 ಲಕ್ಷ ರೂ. ಸಾಲ ಇದೆ. 64 ಸಾವಿರ ರೂ. ನಗದು, 3.15 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಜೊತೆಗೆ 9.5 ಲಕ್ಷ ರೂ. ಸಾಲವನ್ನು ಸಹ ನೀಡಿದ್ದಾರೆ. ಶ್ರೀವತ್ಸ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಸಾ ರಾ ಮಹೇಶ್​ಗಿಂತ ಪತ್ನಿಯೇ ಶ್ರೀಮಂತೆ: ಕೆ‌ ಆರ್ ನಗರದಲ್ಲಿ ನಾಲ್ಕನೇ ಬಾರಿಗೆ ಅಗ್ನಿ ಪರೀಕ್ಷೆಗೆ ಇಳಿದಿರುವ ಸಾ.ರಾ.ಮಹೇಶ್ ಬಿಎಸ್​ಸಿ ಪದವೀಧರರಾಗಿದ್ದು, ಹೊಂದಿರುವ ಆಸ್ತಿಯಲ್ಲಿ ಅರ್ಧದಷ್ಟು ಸಾಲವೇ ಇದೆ. ಜೊತೆಗೆ, ಮಹೇಶ್​ಗಿಂತ ಅವರ ಪತ್ನಿಯೇ ಹೆಚ್ಚು ಆಸ್ತಿ ಹೊಂದಿದ್ದಾರೆ.

25 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವ ಮಹೇಶ್ ಅವರಿಗೆ 10.53 ಕೋಟಿ ರೂ. ಸಾಲವಿದೆ. ಚರಾಸ್ತಿ 4.35 ಕೋಟಿ ರೂ ಹಾಗೂ ಸ್ಥಿರಾಸ್ತಿ 20.67 ಕೋಟಿ ರೂ. ಇದೆ. ಪತ್ನಿ ಹೆಸರಲ್ಲಿ 3.39 ಕೋಟಿ ರೂಪಾಯಿ ಚರಾಸ್ತಿ ಮತ್ತು 20.80 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಹೆಂಡತಿ ಹೆಸರಿನಲ್ಲಿ ಕೂಡ 7.39 ಕೋಟಿ ರೂ. ಸಾಲ ಇದೆ. ಜತೆಗೆ, ಮೊದಲ ಪುತ್ರನ ಹೆಸರಿನಲ್ಲಿ 2.41 ಲಕ್ಷ ರೂ. ಚರಾಸ್ತಿ, 25 ಲಕ್ಷ ರೂ. ಸ್ಥಿರಾಸ್ತಿ ಹಾಗೂ ಎರಡನೇ ಪುತ್ರನ ಹೆಸರಿನಲ್ಲಿ 2.58 ಲಕ್ಷ ರೂ. ಚರಾಸ್ತಿ ಮತ್ತು 48.51 ಲಕ್ಷ ರೂ. ಸ್ಥಿರಾಸ್ತಿ ಇದೆ.

ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಸ್ತಿ ವಿವರವನ್ನು ನೋಡುವುದಾದ್ರೆ, ಸಿದ್ದುಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆಯಾಗಿದ್ದಾರೆ.‌ ಸಿದ್ದರಾಮಯ್ಯನವರ ಒಟ್ಟು ಆಸ್ತಿ ಮೌಲ್ಯ 19.29 ಕೋಟಿ ರೂಪಾಯಿ. ಅದರಲ್ಲಿ 6.89 ಕೋಟಿ ಸಾಲ ಇದೆ. ಒಟ್ಟು ಆಸ್ತಿಯಲ್ಲಿ ಚರಾಸ್ತಿ 9.58 ಕೋಟಿ ಮತ್ತು ಸ್ಥಿರಾಸ್ತಿ 9.43 ಕೋಟಿ ಇದೆ. ಇದರ ಜೊತೆಗೆ ಪತ್ನಿ ಪಾರ್ವತಿ ಸಿದ್ದರಾಮಯ್ಯ ಒಟ್ಟು ಆಸ್ತಿ ಮೌಲ್ಯ 30.82 ಕೋಟಿ ಇದೆ. ಅದರಲ್ಲಿ 16.24 ಕೋಟಿ ಸಾಲವಿದೆ, ಒಟ್ಟು ಚರಾಸ್ತಿ 11.26 ಕೋಟಿ ಮತ್ತು ಸ್ಥಿರಾಸ್ತಿ 19.56 ಕೋಟಿ ಹೊಂದಿದ್ದಾರೆ. ಸಿದ್ದರಾಮಯ್ಯನವರ ಹೆಸರಿನಲ್ಲಿ 28 ಲಕ್ಷ ರೂ. ಮೌಲ್ಯದ ಕಾರು ಹಾಗೂ 350 ಗ್ರಾಂ ಚಿನ್ನ ಮತ್ತು 2 ಕೆಜಿ ಬೆಳ್ಳಿ ಇದೆ. ಹೆಂಡತಿ ಪಾರ್ವತಿ ಸಿದ್ದರಾಮಯ್ಯ 540 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಹೊಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರಿಗಿಂತ ಹೆಚ್ಚು ಶ್ರೀಮಂತೆಯಾದ ಅವರ ಪತ್ನಿ ಹೆಸರಿನಲ್ಲಿ ಸಾಲವು ಹೆಚ್ಚಾಗಿದೆ.

ಇದನ್ನೂ ಓದಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಆಸ್ತಿ ವಿವರ ಘೋಷಣೆ ; ಮಾಜಿ ಸಿಎಂ ಗಿಂತ ಅವರ ಪತ್ನಿಯೇ ಶ್ರೀಮಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.