ETV Bharat / state

ಮೈಸೂರು: ಪ್ರೇಯಸಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಬಂಧನ - ಈಟಿವಿ ಭಾರತ ಕನ್ನಡ

ಮೈಸೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದು, ಆಶಿಕ್​ ಅಪೂರ್ವ ಶೆಟ್ಟಿ ಕತ್ತು ಹಿಸುಕಿ ಕೊಲೆ ಮಾಡಿದ್ದನು.

Arrested Accused Ashik
ಬಂಧಿತ ಆರೋಪಿ ಆಶಿಕ್​
author img

By

Published : Sep 2, 2022, 12:24 PM IST

ಮೈಸೂರು: ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಯುವತಿಯನ್ನು, ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಕ್ (28) ಬಂಧಿತ ಆರೋಪಿ. ಕೊಲೆಗೀಡಾದ ಅಪೂರ್ವ ಶೆಟ್ಟಿ (21) ಹಾಗೂ ಆಶಿಕ್ ಪ್ರೀತಿಸುತ್ತಿದ್ದರು.

ವಿಜಯನಗರದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಅಪೂರ್ವ ಶೆಟ್ಟಿ, ಮೂರು ದಿನಗಳ ಕಾಲ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರಿಯಕರನೊಂದಿಗೆ ವಾಸ್ತವ್ಯ ಹೂಡಿದ್ದಳು. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು, ಅಪೂರ್ವ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆಶಿಕ್, ಬಳಿಕ ಕತ್ತು ಹಿಸುಕಿ‌‌ ಕೊಲೆಗೈದು ಪರಾರಿಯಾಗಿದ್ದನು.

ಬಳಿಕ ಹೋಟೆಲ್​ನಿಂದ ಹೊರಟಿದ್ದ ಆಶಿಕ್ ಕೂಡ ಪಿರಿಯಾಪಟ್ಟಣದ ಕಂಪ್ಲಾಪುರ ಬಳಿ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿದ್ದನು. ಆಶಿಕ್​ನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆತನಿದ್ದ ಸ್ಥಳವನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮೈಸೂರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಅನಾರೋಗ್ಯದಿಂದ ಬಯಲಾದ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.