ETV Bharat / state

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಪ್ರತಿ ಬಜೆಟ್​ನಲ್ಲೂ 500 ಕೋಟಿ ಮೀಸಲಿಡಿ.. ಪಾರಂಪರಿಕ ತಜ್ಞ ಪ್ರೊ ರಂಗರಾಜು - ಪಾರಂಪರಿಕ ಕಟ್ಟಡಗಳ ಸಂರಕ್ಷಣೆ

ಮೈಸೂರಿನ ನಗರದಲ್ಲಿರುವ ಪಾರಂಪರಿಕ ಕಟ್ಟಡಗಳು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದ್ದು, ಅವುಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಪಾರಂಪರಿಕ ತಜ್ಞ ಪ್ರೊ ರಂಗರಾಜು ಅವರು ತಿಳಿಸಿದ್ದಾರೆ.

ಪಾರಂಪರಿಕ ತಜ್ಞ ಪ್ರೊ ರಂಗರಾಜು
ಪಾರಂಪರಿಕ ತಜ್ಞ ಪ್ರೊ ರಂಗರಾಜು
author img

By

Published : Oct 18, 2022, 5:26 PM IST

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಪಾರಂಪರಿಕ ನಗರವೂ ಹೌದು. ಪ್ರಪಂಚದಲ್ಲಿ ಸ್ವಚ್ಛ ಹಾಗೂ ಪಾರಂಪರಿಕ ನಗರಗಳ ಪೈಕಿ ಮೈಸೂರು ಸಹಾ ಒಂದಾಗಿದೆ. ಆದರೆ ಮೈಸೂರಿನ ನಗರದಲ್ಲಿರುವ ಪಾರಂಪರಿಕ ಕಟ್ಟಡಗಳು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದ್ದು, ಅವುಗಳ ಸಂರಕ್ಷಣೆ ಅಗತ್ಯವಾಗಿದೆ. ಇದಕ್ಕಾಗಿ ಸರ್ಕಾರ ಪ್ರತಿ ಬಜೆಟ್​ನಲ್ಲೂ ಹಣ ನೀಡಬೇಕೆಂದು ಪಾರಂಪರಿಕ ತಜ್ಞರಾದ ಪ್ರೊ. ರಂಗರಾಜು ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸವಿಸ್ತಾರವಾಗಿ ಪಾರಂಪರಿಕ ಕಟ್ಟಡಗಳ ವಸ್ತುಸ್ಥಿತಿ ಹಾಗೂ ಅವುಗಳ ಸಂರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.

ಅಂಬಾವಿಲಾಸ ಅರಮನೆ ಕೋಟೆ ಸಹಾ ಕುಸಿದು ಬಿದ್ದಿದೆ: ಪಾರಂಪರಿಕ ನಗರಿ ಮೈಸೂರಿನಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಪ್ರತಿದಿನ ಒಂದೊಂದು ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆ ತಲುಪುತ್ತಿದ್ದು, ಮೈಸೂರು ನಗರದ ಪಾರಂಪರಿಕ ದೇವರಾಜ ಮಾರುಕಟ್ಟೆಯ ಒಂದು ಭಾಗ ಶಿಥಿಲಾವಸ್ಥೆಯಿಂದ ಬಿದ್ದು ಹೋಗಿತ್ತು. ಲ್ಯಾನ್ ಸ್ಟೋನ್ ಕಟ್ಟಡ, ಕಳೆದ ವರ್ಷ ಪಾರಂಪರಿಕ ಅಗ್ನಿಶಾಮಕ ಠಾಣೆ, ಜಯಲಕ್ಷ್ಮಿ ವಿಲಾಸ ಅರಮನೆಯ ಮೇಲ್ಚಾವಣಿ ಹಾಗೂ ದೊಡ್ಡ ಗಡಿಯಾರ ಸಹಾ ಬಿರುಕು ಬಿಟ್ಟಿದ್ದು, ಅದರ ಸಾಲಿಗೆ ಈಗ ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆ ಕೋಟೆ ಸಹಾ ಕುಸಿದು ಬಿದ್ದಿದೆ.

ಪಾರಂಪರಿಕ ತಜ್ಞ ಪ್ರೊ ರಂಗರಾಜು ಅವರ ಸಂದರ್ಶನ

ಇದಕ್ಕೆ ಪ್ರಮುಖ ಕಾರಣ ಸರಿಯಾದ ನಿರ್ವಹಣೆಗೆ ಹಣ ಇಲ್ಲದೆ ಇರುವುದು. ಇದಕ್ಕಾಗಿ ಪ್ರತಿ ವರ್ಷ ಸರ್ಕಾರ 500 ಕೋಟಿ ರೂಪಾಯಿ ಬಜೆಟ್​ನಲ್ಲಿ ಅನುದಾನ ನೀಡಿದರೆ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಬಹುದು ಎನ್ನುತ್ತಾರೆ ಪಾರಂಪರಿಕ ತಜ್ಞ ಪ್ರೊ ರಂಗರಾಜು.

ಮೂರು ವಿಧದ ಪಾರಂಪರಿಕ ಕಟ್ಟಡಗಳು: ಮೈಸೂರು ನಗರ ಪಾರಂಪರಿಕ ನಗರವಾಗಿದ್ದು, ಇಲ್ಲಿ ಮೂರು ವಿಧದ ಪಾರಂಪರಿಕ ಕಟ್ಟಡಗಳಿವೆ. ಅದರಲ್ಲಿ ಧಾರ್ಮಿಕ ಕಟ್ಟಡಗಳು (ದೇವಾಲಯಗಳು), ಲೌಕಿಕ ಕಟ್ಟಡಗಳು( ಕಚೇರಿ ಇತರೆ ಸಾರ್ವಜನಿಕ ಕಟ್ಟಡಗಳು) ಹಾಗೂ ಸಂರಕ್ಷಣಾ ವಾಸ್ತುಶಿಲ್ಪ ( ಕೋಟೆ ಇತ್ತ್ಯಾದಿ ಕಟ್ಟಡಗಳು) ಇಲ್ಲಿ ನೋಡಬಹುದಾಗಿದ್ದು, ಈ ಎಲ್ಲವೂ ಮೈಸೂರು ಮಹಾರಾಜರ ಕೊಡುಗೆಯಾಗಿದೆ.

1790 ರ ದಶಕದಲ್ಲಿ ಇಡೀ ಮೈಸೂರು, ಮೈಸೂರು ಕೋಟೆಯ ಒಳಗಿತ್ತು. ನಂತರ ಬಂದ ಹಲವಾರು ರೋಗ-ರುಜಿನಗಳಿಗೆ ತುತ್ತಾಗಿ ಜನರು ಕೋಟೆಯನ್ನು ತೊರೆದು ಹೊರಗೆ ಬಂದರು. ಅಲ್ಲಿಂದ ಮೈಸೂರು ವಿಶಾಲವಾಯಿತು ಎನ್ನುತ್ತಾರೆ ಪಾರಂಪರಿಕ ತಜ್ಞರು. ಮೈಸೂರಿನ ನಗರದ ಪಾರಂಪರಿಕ ಕಟ್ಟಡಗಳ ರಕ್ಷಣೆ ಮಾಡಲು ಈಗ ವೈಜ್ಞಾನಿಕ ವಿಧಾನಗಳು ಬಂದಿದ್ದು, ಮೈಸೂರು ನಗರದಲ್ಲಿ 100 ವರ್ಷ ತುಂಬಿರುವ ಸುಮಾರು 120ಕ್ಕೂ ಹೆಚ್ಚು ಮಹಾರಾಜರು ನಿರ್ಮಿಸಿದ ಪಾರಂಪರಿಕ ಕಟ್ಟಡಗಳಿದ್ದು, ಆ ಕಟ್ಟಡಗಳು ಈಗ ಶಿಥಿಲಾವಸ್ಥೆಗೆ ತಲುಪಿವೆ..

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡಬಹುದು: ಹಿಂದೆ ಕಟ್ಟಡಗಳ ನಿರ್ಮಾಣಕ್ಕೆ ಕಾಂಕ್ರಿಟ್​ ಬಳಸುತ್ತಿರಲಿಲ್ಲ. ಬದಲಾಗಿ ಸುಣ್ಣ, ಮಣ್ಣು, ಇಟ್ಟಿಗೆ ಮತ್ತು ಕಲ್ಲುಗಳನ್ನು ಬಳಸುತ್ತಿದ್ದರು. ಹೆಚ್ಚು ಮಳೆಯಾದರೆ ಅವುಗಳು ಹೆಚ್ಚಿನ ನೀರನ್ನು ಶೇಖರಣೆ ಮಾಡಿಕೊಳ್ಳುತ್ತವೆ. ಆಗ ಆ ಜಾಗದಲ್ಲಿ ಸಣ್ಣ ಸಣ್ಣ ಗಿಡಗಳು ಬಂದು ಇಡೀ ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತದೆ. ಆದರೆ ಈಗ ವೈಜ್ಞಾನಿಕ ವಿಧಾನಗಳಿದ್ದು, ಅವುಗಳ ರಕ್ಷಣೆ ಮಾಡಬಹುದು. ಪ್ರತೀ ವರ್ಷ ಸರ್ಕಾರ ಬಜೆಟ್​ನಲ್ಲಿ ಇಂತಿಷ್ಟು ಹಣ ಇಡಬೇಕು. ಆಗ ಮಾತ್ರ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡಬಹುದು ಎಂದು ಪ್ರೋ. ರಂಗರಾಜು ಸಂದರ್ಶನದಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ.

ಓದಿ: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಕುಸಿತ: ಮೂವರು ಪ್ರಾಣಾಪಾಯದಿಂದ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.