ETV Bharat / state

ದಕ್ಷಿಣ ಪದವೀಧರ ಚುನಾವಣೆಯ ಸಭೆಯಲ್ಲಿ ಗಲಾಟೆ : ವಿಡಿಯೋ ವೈರಲ್ - ದಕ್ಷಿಣ ಪದವೀಧರ ಚುನಾವಣೆ ಸಭೆಯಲ್ಲಿ ಗಲಾಟೆ

ಚುನಾವಣೆಯ ವಿಚಾರವಾಗಿ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಸಿ. ಹೆಚ್ ವಿಜಯಶಂಕರ್ ಅವರು ಹಳೆಯ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ವಸಂತ್ ಕುಮಾರ್ ಪ್ರಸಕ್ತ ವಿಚಾರಗಳ ಬಗ್ಗೆ ಮಾತನಾಡುವಂತೆ ಮನವಿ ಮಾಡಿದರು. ಅಷ್ಟಕ್ಕೆ ಆಕ್ರೋಶಗೊಂಡ ವಿಜಯಶಂಕರ್ ಹಾಗೂ ಬೆಂಬಲಿಗರು ವಸಂತ್ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

an-uproar-at-the-meeting-of-election-of-southern-graduates

author img

By

Published : May 23, 2022, 5:19 PM IST

ಮೈಸೂರು: ದಕ್ಷಿಣ ಪದವೀಧರ ಚುನಾವಣೆ ಸಭೆಯಲ್ಲಿ ಬಿಜೆಪಿಯ ಮಾಜಿ ಸಂಸದ ಸಿ ಹೆಚ್​ ವಿಜಯಶಂಕರ್ ಅವರು ಬಿಜೆಪಿ ಜಿಲ್ಲಾ ಸಹ ವಕ್ತಾರ ವಸಂತ್ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ದಕ್ಷಿಣ ಪದವೀಧರ ಚುನಾವಣೆ ಸಭೆಯಲ್ಲಿ ಗಲಾಟೆ

ಪಿರಿಯಾಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದ್ದ ದಕ್ಷಿಣ ಪದವೀಧರ ಚುನಾವಣೆಯ ಸಭೆಯಲ್ಲಿ ವಿಜಯಶಂಕರ್ ಅವರು ಪಕ್ಷದ ಮುಖಂಡ, ಬಿಜೆಪಿ ಜಿಲ್ಲಾ ಸಹ ವಕ್ತಾರ ವಸಂತ್ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾದ ವಿಡಿಯೋ ಕೂಡ ವೈರಲ್ ಆಗಿದೆ.

ಚುನಾವಣೆಯ ವಿಚಾರವಾಗಿ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಸಿ. ಹೆಚ್ ವಿಜಯಶಂಕರ್ ಅವರು ಹಳೆಯ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ವಸಂತ್ ಕುಮಾರ್ ಪ್ರಸಕ್ತ ವಿಚಾರಗಳ ಬಗ್ಗೆ ಮಾತನಾಡುವಂತೆ ಮನವಿ ಮಾಡಿದರು. ಅಷ್ಟಕ್ಕೆ ಆಕ್ರೋಶಗೊಂಡ ವಿಜಯಶಂಕರ್ ಹಾಗೂ ಬೆಂಬಲಿಗರು ವಸಂತ್ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ. ಈ ಪರಿಣಾಮ ಸಭೆ ನಡೆಯುತ್ತಿದ್ದ ಬಿಜೆಪಿ ಕಚೇರಿ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ನಂತರ ಸ್ಥಳೀಯ ಮುಖಂಡರು ಅವರನ್ನು ಸಮಾಧಾನ ಪಡಿಸಿದ್ದಾರೆ.

ಓದಿ: ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಸಮನ್ಸ್.. ವಿಚಾರಣೆಗೆ ಹಾಜರಾಗಲು ಸೂಚನೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.