ಮೈಸೂರು: ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡುತ್ತೇವೆ ಎಂದು ಡಿಚಿಎಫ್ ಅಲೆಗ್ಸಾಂಡರ್ ಹೇಳಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಾಖಲಾದಂತೆ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗುವುದು. ಈಗ ನಡೆದಿರುವ 2 ಘಟನೆಗಳಲ್ಲಿ ನರಭಕ್ಷಕ ಹುಲಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆ ಹುಲಿ ನರಭಕ್ಷಕ ಆಗಿದ್ದರೆ ಮನುಷ್ಯನ ಶರೀರವನ್ನು ತಿನ್ನಬೇಕಿತ್ತು. ಇದು ಆಕಸ್ಮಿಕವಾಗಿ ಆಗಿರುವಂತಹದ್ದು. ಈ ಘಟನೆಗೆ ಯಾವ ಹುಲಿ ಕಾರಣ ಎಂದು ಕಂಡುಹಿಡಿಯುತ್ತೇವೆ ಎಂದು ಅವರು ಹೇಳಿದ್ದಾರೆ.
ಇಂದು ಅರಮನೆಯ ಆವರಣದಲ್ಲಿ ಗಜಪಡೆಯಯನ್ನು ಸಾಂಪ್ರದಾಯಿಕವಾಗಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಎಲೆಗ್ಸಾಂಡರ್, ಹುಲಿಯನ್ನು ಖಂಡಿತವಾಗಿ ಸೆರೆ ಹಿಡಿಯುತ್ತೇವೆ ಎಂದರು.
1 ವಾರಗಳ ಕಾಲ ಆ ಪ್ರದೇಶದ ಕಡೆ ದನಕರುಗಳನ್ನು ಬಿಡಬೇಡಿ ಎಂದು ಹೇಳಿದ್ದೇವೆ. ಇದಕ್ಕೆ ಗ್ರಾಮಸ್ಥರು ಒಪ್ಪಿದ್ದಾರೆ. ಒಂದೆರಡು ದಿನಗಳಲ್ಲಿ ಬೇಟೆಯಾಡಿರುವ ಸ್ಥಳಕ್ಕೆ ಹುಲಿ ಬರುತ್ತದೆ. ಇದಕ್ಕಾಗಿ ಈಗಾಗಲೇ ಆನೆ ಮೇಲೆ ಕಾರ್ಯಾಚರಣೆ ಆರಂಭಿಸಿದ್ದು, 7 ಜನ ಅರವಳಿಕೆ ತಜ್ಞರನ್ನು ನಿಯೋಜನೆ ಮಾಡಲಾಗಿದೆ. ಅವರು ಹುಲಿಗೆ ಅರವಳಿಕೆ ಮದ್ದನ್ನು ನೀಡಿ ಜೀವಂತವಾಗಿ ಹಿಡಿಯುತ್ತಾರೆ ಎಂದು ಡಿಸಿಎಫ್ ಎಲೆಗ್ಸಾಂಡರ್ ತಿಳಿಸಿದರು.