ಮೈಸೂರು : ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಕಂಗಾಲಾಗಿರುವ ಅಲೆಮಾರಿಗಳು, ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಿದ್ದಾರೆ.
ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಬಳಿ ಇರುವ 40 ಅಲೆಮಾರಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಹಣೆಬೊಟ್ಟು,ಹೇರ್ಪಿನ್ ಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಕೊರೊನಾ ಬರೆ ಎಳೆದಿದೆ.
ತಿನ್ನಲು ಊಟವಿಲ್ಲದೇ ಈ ಕುಟುಂಬಗಳು ಪರದಾಡುತ್ತಿದ್ದು,ಸದ್ಯ ಯಾವುದೇ ಕೆಲಸವಿಲ್ಲದೇ ಎಲ್ಲಿಯೂ ಹೋಗಲಾರದೇ ಇರುವುದರಿಂದ ದಾನಿಗಳು ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.