ಮೈಸೂರು : ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.
ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮಾನಸ ಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ಜ.8ರಂದು ಇಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸಿದ ವೇಳೆ ನಳಿನಿ ‘ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸಾಕಷ್ಟು ವಿವಾದ ಪಡೆದುಕೊಂಡಿತು. ನಳಿನಿ ವಿರುದ್ಧ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಧಾರ ಕೈಗೊಂಡಿತ್ತು.
ಆರೋಪಿ ಸ್ಥಾನದಲ್ಲಿರುವ ಮೈಸೂರು ವಿವಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿಕೊಳ್ಳಲು ತಾವು ಸಿದ್ಧರಿರುವುದಾಗಿ ಚಿಂತಕ, ವಕೀಲ ಸಿ ಎಸ್ ದ್ವಾರಕನಾಥ್, ಎಸ್.ಶಂಕರಪ್ಪ, ಕೆ ಎನ್ ಜಗದೀಶ್ ಮಹದೇವು ಸೇರಿ ಹಲವಾರು ವಕೀಲರುಗಳು ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ.