ETV Bharat / state

Santro Ravi arrest: ಗುಜರಾತ್​ನಲ್ಲಿ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್​ ಕುಮಾರ್​

ಗುಜರಾತ್​ನಲ್ಲಿ ಕರ್ನಾಟಕ ಪೊಲೀಸರ ಕಾರ್ಯಾಚಣೆ - ಹತ್ತು ದಿನಗಳಿಂದ ತಲೆ ಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಬಂಧನ.

Santro Ravi arrest
ಸ್ಯಾಂಟ್ರೋ ರವಿ
author img

By

Published : Jan 13, 2023, 5:29 PM IST

Updated : Jan 13, 2023, 7:27 PM IST

ಗುಜರಾತ್​ನಲ್ಲಿ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್​ ಕುಮಾರ್​

ಮೈಸೂರು: ಕೆ.ಎಸ್‌.ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿಯನ್ನು ಮೈಸೂರು ಪೊಲೀಸರು ಗುಜರಾತ್‌ನಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಯುವತಿಯೊಬ್ಬರಿಗೆ ಕೆಲಸ ನೀಡುವ ಭರವಸೆ ನೀಡಿ ಅವರನ್ನು ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸ್ವತಃ ಸಂತ್ರಸ್ತೆಯೇ ಆತನ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ನಂತರ ರಾಜ್ಯ ರಾಜಕಾರಣದಲ್ಲಿ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಬಾರಿ ಸದ್ದು ಮಾಡಿತ್ತು. ದೂರು ದಾಖಲಿ ಹತ್ತು ದಿನವಾದರೂ ಆತ ಸಿಕ್ಕಿರಲಿಲ್ಲ. ಕೊನೆಗೂ ಪೊಲೀಸ್​ ಬಲೆಗೆ ಸ್ಯಾಂಟ್ರೂ ರವಿ ಬಿದ್ದಿದ್ದಾನೆ. ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ದೂರದ ಗುಜರಾತ್​ನಲ್ಲಿ ಕರ್ನಾಟಕ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವಿಷಯವನ್ನು ಎಡಿಜಿಪಿ ಅಲೋಕ್​ ಕುಮಾರ್​ ದೃಢಪಡಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಎಡಿಜಿಪಿ ಹೇಳಿದ್ದಿಷ್ಟು: ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಲೋಕ್​ ಕುಮಾರ್​, ’’ಕೆ.ಎಸ್‌.ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿ ಗುಜರಾತ್​ನ ಅಹಮದಾಬಾದ್​ನಲ್ಲಿ ತಲೆ ಮರೆಸಿಕೊಂಡಿದ್ದ. ಮೈಸೂರು ಪೊಲೀಸರು ಗುಜರಾತ್​ ಪೊಲೀಸರ ಸಹಾಯದಿಂದ ರವಿಯನ್ನು ಚೇಸ್​ ಮಾಡಿ ಬಂಧಿಸಿದ್ದಾರೆ. ಇಲ್ಲಿನ ವಿಜಯನಗರ ಪೊಲೀಸ್​ ಠಾಣೆಯಲ್ಲಿ 12ನೇ ದಿನದ ಹಿಂದೆ ರವಿ ವಿರುದ್ಧ ಕೇಸ್​ ದಾಖಲಾಗಿತ್ತು. ಮೈಸೂರು ಕಮಿಷನರ್​ ರಮೇಶ್ ಅವರ ನೇತೃತ್ವದಲ್ಲಿ ವಿವಿಧ ತಂಡಗಳನ್ನು ಮಾಡಿಕೊಂಡು ತನಿಖೆ ಆರಂಭಿಸಿದ್ದರು’’ ಎಂದರು.

’’ರಾಜ್ಯದಲ್ಲಿ ರವಿಯ ಬಂಧನಕ್ಕೆ ಹುಡುಕಾಟ ಆರಂಭಿಸಿದ ನಂತರ ಹೊರ ರಾಜ್ಯದಲ್ಲಿ ಓಡಾಟ ಶುರುವಾಗಿತ್ತು. ಈ ಸುಳಿವು ಪೊಲೀಸ್​ ಇಲಾಖೆಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಿ ಕೊಡಲಾಗಿತ್ತು. ನಿನ್ನೆ ತೆಲಂಗಾಣದಲ್ಲಿ ಆತ ಇದ್ದ ಎಂಬುದಾಗಿ ತಿಳಿದು ಬಂದಿತ್ತು. ಅಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕಿರಲಿಲ್ಲ. ಈತ ದಿನಕ್ಕೊಂದು ಸ್ಥಳ ಬದಲಾವಣೆ ಮಾಡಿಕೊಂಡು ತಲೆಯಲ್ಲಿದ್ದ ವಿಗ್ ಅನ್ನ ತೆಗೆದು, ತಲೆ ಮರೆಸಿಕೊಂಡು ಓಡಾಡಿ ಪೊಲೀಸ್​ ಕಾರ್ಯಾಚರಣೆ ದಾರಿ ತಪ್ಪಿಸುತ್ತಿದ್ದ. ಇವತ್ತು ಗುಜರಾತ್​ನ ಅಹಮದಾಬಾದ್​ನಲ್ಲಿರುವುದು ತಿಳಿದು ಅಲ್ಲಿನ ಸ್ಥಳೀಯ ಪೊಲೀಸರ ಸಹಾಯದಿಂದ ರವಿಯನ್ನು ಬಂಧಿಸಲಾಗಿದೆ. ಗುಜರಾತ್​ ಕೋರ್ಟ್​ಗೆ ಹಾಜರುಪಡಿಸಿ ನಂತರ ರಾಜ್ಯಕ್ಕೆ ಕರೆತರಲಾಗುವುದು‘‘ ಎಂದು ಇದೇ ವೇಳೆ ಅಲೋಕ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ನಾಲ್ವರ ಬಂಧನ: ಗುಜರಾತ್​ನ ಅಹಮದಾಬಾದ್​ನಲ್ಲಿ ಮಂಜುನಾಥ ಅಲಿಯಾಸ್ ಸ್ಯಂಟ್ರೊ ರವಿ (51), ರಾಮ್ ಜಿ (45), ಸತೀಶ್ ಕುಮಾರ್ (35) ಹಾಗೂ ಕರ್ನಾಟಕದಲ್ಲಿ ಮಧುಸೂದನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

ರವಿಗಾಗಿ ಇಂದು ಎರಡನೇ ಬಾರಿಗೆ ಸಭೆ ನಡೆಸಿದ ಎಡಿಜಿಪಿ : ದೂರು ದಾಖಲಾಗಿ 10 ದಿನಗಳು ಕಳೆಯುತ್ತಿದ್ದರೂ ಸ್ಯಾಂಟ್ರೋ ರವಿ ಬಂಧನ ಆಗಿಲ್ಲ, ಈ ಬಗ್ಗೆ ಎರಡನೇ ಬಾರಿಗೆ ಮೈಸೂರು ನಗರ ಪೊಲೀಸ್ ಕಚೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ರಾಮನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೈಸೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಬಂಧನ ಹಾಗೂ ಮುಂದಿನ ಕಾರ್ಯಾಚರಣೆ ಬಗ್ಗೆ ಚರ್ಚಿಸಿದ್ದರು.

ಸ್ಯಾಂಟ್ರೊ ರವಿ ಬಂಧನಕ್ಕೆ ಪೊಲೀಸ್ ಬಲೆ: ವಿಶೇಷ ಪೊಲೀಸ್ ತಂಡಗಳು ಕಳೆದ ಮೂರು ದಿನಗಳಿಂದ ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯಗಳಿಗೂ ಪೊಲೀಸ್ ತಂಡಗಳು ತೆರಳಿದ್ದವು. ಆದರೆ, ಸ್ಯಾಂಟ್ರೊ ರವಿ ತನ್ನ ಎಲ್ಲ ಮೊಬೈಲ್​ಗಳನ್ನ ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದರಿಂದ ಪೊಲೀಸರಿಗೆ ಆತನ ಹುಡುಕಾಡುವುದು ಕಷ್ಟವಾಗಿತ್ತು. ಈ ನಡುವೆ ಕಳೆದ ವಾರ ಮೈಸೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮಿನಿಗೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯ ಅರ್ಜಿಯನ್ನು ಜನವರಿ 17 ಕ್ಕೆ ಮುಂದೂಡಲಾಗಿತ್ತು.

ಪ್ರಧಾನ ಮಂತ್ರಿಗಳು ಇದೇ ತಿಂಗಳ 19 ರಂದು ಬೆಂಗಳೂರಿಗೆ ಬರುತ್ತಾರೆ. ಅಲ್ಲಿಯವರೆಗೆ ಮೈಸೂರಿನಲ್ಲಿ ಇರುತ್ತೇನೆ, ಅಷ್ಟರೊಳಗೆ ಸ್ಯಾಂಟ್ರೊ ರವಿ ಬಂಧನ ಮಾಡೇ ಮಾಡುತ್ತೇವೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ.ಅಲೋಕ್ ಕುಮಾರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: LIVE: ಸ್ಯಾಂಟ್ರೋ ರವಿ ಬಂಧನ ಕುರಿತಂತೆ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗೋಷ್ಠಿ

Last Updated : Jan 13, 2023, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.