ETV Bharat / state

ಪೊಲೀಸ್​ ಲಾಠಿ ಸಿಲುಕಿ ಬೈಕ್​ ಸವಾರ ಸಾವು ಆರೋಪ: ರೊಚ್ಚಿಗೆದ್ದ ಸಾರ್ವಜನಿಕರಿಂದ ಪೊಲೀಸರಿಗೆ ಧರ್ಮದೇಟು - Mysuru

ಹಿನಕಲ್ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹ್ಯಾಂಡಲ್​ಗೆ ಪೊಲೀಸ್​ ಲಾಠಿ ಸಿಲುಕಿ ಆಯತಪ್ಪಿ ಬಿದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್​ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಕೆರಳಿದ ಸಾರ್ವಜನಿಕರು ಪೊಲೀಸ್ ಗಸ್ತು ವಾಹನ ಜಖಂಗೊಳಿಸಿ, ಪೊಲೀಸರನ್ನು ಅಟ್ಟಾಡಿಸಿ ಹೊಡೆದಿದ್ದಾರೆ.

mysuru
ಹ್ಯಾಂಡಲ್​​ಗೆ ಲಾಠಿ ಸಿಲುಕಿ ಬೈಕ್ ಸವಾರ ಸಾವು
author img

By

Published : Mar 22, 2021, 8:44 PM IST

Updated : Mar 23, 2021, 5:49 PM IST

ಮೈಸೂರು : ಸಂಚಾರಿ ಪೊಲೀಸ್ ತಪಾಸಣೆ ವೇಳೆ ಹ್ಯಾಂಡಲ್​​ಗೆ ಲಾಠಿ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಯುವಕನ ಸಾವಿಗೆ ಕಾರಣರಾದ ಪೊಲೀಸರಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ, ನಗರದ ಹಿನ್​ಕಲ್ ನಲ್ಲಿ ನಡೆದಿದೆ.

ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಹಿನಕಲ್ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹ್ಯಾಂಡಲ್​ಗೆ ಪೊಲೀಸ್​ ಲಾಠಿ ಸಿಲುಕಿ ಆಯತಪ್ಪಿ ಬಿದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್​ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಕೆರಳಿದ ಸಾರ್ವಜನಿಕರು ಪೊಲೀಸ್ ಗಸ್ತು ವಾಹನ ಜಖಂಗೊಳಿಸಿ, ಪೊಲೀಸರನ್ನು ಅಟ್ಟಾಡಿಸಿ ಹೊಡೆದಿದ್ದಾರೆ.

ರೊಚ್ಚಿಗೆದ್ದ ಸಾರ್ವಜನಿಕರಿಂದ ಪೊಲೀಸರಿಗೆ ಧರ್ಮದೇಟು

ಬೈಕ್​ ಸವಾರ ಹೆಲ್ಮೆಟ್ ಧರಿಸಿದ್ದರೂ ಸಹ ಪೊಲೀಸರು ಅಡ್ಡಗಟ್ಟಿದ ಪರಿಣಾಮ ಯುವಕ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ತಪಾಸಣೆ ವೇಳೆ ಪೊಲೀಸ್ ಕಾನ್ಸ್​​ಟೇಬಲ್​ ಲಾಠಿ ಬೀಸಿದ ಪರಿಣಾಮ ಬೈಕ್​ನ ಹ್ಯಾಂಡಲ್​​ಗೆ ಲಾಠಿ ಸಿಲುಕಿದೆ. ಆಗ ಸವಾರ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಓದಿ: ಸಾರಿಗೆ ಸಂಸ್ಥೆ ಬಸ್​ಗೆ ಬೈಕ್ ಡಿಕ್ಕಿ: ಬ್ಯಾಂಕ್ ನೌಕರ ಸ್ಥಳದಲ್ಲೇ ಸಾವು

Last Updated : Mar 23, 2021, 5:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.