ಮೈಸೂರು: ಬದುಕಿದ್ದಾಗ ಮಾತ್ರವಲ್ಲದೆ ಸತ್ತ ನಂತರ ಅಂತ್ಯಕ್ರಿಯೆ ಮಾಡಲು ಕೂಡ ಆಧಾರ್ ಅವಶ್ಯಕ ಎಂಬ ನಿಯಮವನ್ನು ಮೈಸೂರು ಮಹಾನಗರ ಪಾಲಿಕೆ ತಮ್ಮ ವ್ಯಾಪ್ತಿಯ ರುದ್ರಭೂಮಿಯಲ್ಲಿ ಜಾರಿಗೆ ತಂದಿದೆ..
ಈ ಸಂಬಂಧ ಮಾತನಾಡಿದ ಪಾಲಿಕೆ ಅಧಿಕಾರಿ ಅನಿಲ್ ಕ್ರಿಸ್ಟಿ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 38 ರುದ್ರಭೂಮಿಗಳಿದ್ದು, ಈ ಚಿತಾಗಾರಗಳಿಗೆ ಅಂತ್ಯಕ್ರಿಯೆ ಮಾಡಲು ಬರುವ ಜನರು ಸತ್ತ ವ್ಯಕ್ತಿಯ ಆಧಾರ್ ಕಾರ್ಡ್ ಅಥವಾ ಇತರೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ತರಬೇಕು, ಕೆಲವು ವ್ಯಕ್ತಿಗಳನ್ನು ಬೇರೆ ಬೇರೆ ಹೆಸರುಳಿಂದ ಗುರುತಿಸಲ್ಪಟ್ಟಿರುತ್ತಾರೆ, ಜೊತೆಗೆ ಮರಣ ನೋಂದಣಿ ಫಾರಂ ಬರೆದು ಕೊಡಲು ಅನುಕೂಲವಾಗುತ್ತದೆ ಮತ್ತು ಕಾನೂನಾತ್ಮಕ ಸಮಸ್ಯೆಗಳು ಉಂಟಾಗದಿರಲಿ ಎಂದು ಆಧಾರ್ ಕೇಳುತ್ತೇವೆ, ಆದರೆ ಕಡ್ಡಾಯವೇನಿಲ್ಲ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಈ ಕ್ರಮವನ್ನು ಸ್ಥಳೀಯರು ಕೂಡ ಒಪ್ಪಿಕೊಂಡಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದಿದ್ದಾರೆ.