ETV Bharat / state

ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ: ಡಿಸಿ ಸ್ಪಷ್ಟನೆ

ಮತದಾರರ ಚೀಟಿಗೆ ಆಧಾರ್​ ಲಿಂಕ್​ ಕಡ್ಡಾಯವಲ್ಲ. ಕೆಲವು ಜಿಲ್ಲೆಗಳಲ್ಲಿ ಈ ಕೆಲಸ ಆಗಿದ್ದು, ಇನ್ನೂ ಕೆಲವು ಕಡೆ ಆಗಿಲ್ಲ.ಹಾಗಾಗಿ ಇದನ್ನು ಕಡ್ಡಾಯ ಮಾಡಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ತಿಳಿಸಿದ್ದಾರೆ.

ಡಿಸಿ ಸ್ಪಷ್ಟನೆ
ಡಿಸಿ ಸ್ಪಷ್ಟನೆ
author img

By

Published : Dec 1, 2022, 7:51 PM IST

ಮೈಸೂರು: ವೋಟರ್ ಐಡಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆಧಾರ್ ಬದಲಾಗಿ ಚುನಾವಣೆ ಆಯೋಗ ನಿಗದಿಪಡಿಸಿರುವ ದಾಖಲಾತಿ ಕೊಡಬಹುದು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಿಯೋಗದೊಂದಿಗೆ ಚರ್ಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಶೇ.60 ರಷ್ಟು ಮತದಾರರ ಚೀಟಿಗೆ ಆಧಾರ್ ಲಿಂಕ್ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಈ ಕೆಲಸ ಆಗಿದ್ದು, ಇನ್ನೂ ಕೆಲವು ಕಡೆ ಆಗಿಲ್ಲ. ಹಾಗಾಗಿ ಇದನ್ನು ಕಡ್ಡಾಯ ಮಾಡಿಲ್ಲ. ಪರಿಷ್ಕರಣೆಯಲ್ಲಿ ಹೆಸರು ಕೈ ಬಿಟ್ಟಿರುವ ಸಂಬಂಧ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ಮಾಡಿತ್ತು. ಅವರಿಗೆ ಈ ಪಟ್ಟಿಯಿಂದ ಕೈಬಿಡಲಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದರು.

ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ

ಒಂದೇ ಜಿಲ್ಲೆಯಲ್ಲಿ ಎರಡು ಕಡೆ ಪಟ್ಟಿಯಲ್ಲಿ ಹೆಸರಿದ್ದರೆ, ಅಂತಹವರ ಹೆಸರನ್ನ ಕೈಬಿಟ್ಟಿದ್ದೇವೆ. ಬೂತ್ ಲೇವಲ್ ಅಧಿಕಾರಿಗಳು ತಪ್ಪಾಗಿ ಕೆಲಸ ಮಾಡಿದ್ದಾರೆ. ನಮಗೆ ಮಾಹಿತಿ ನೀಡುವಂತೆ ತಿಳಿಸಿದ್ದೇವೆ. ಎಸ್​​​​ಒಪಿ ಪ್ರಕಾರವೇ ಎರಡು ಹೆಸರು ಇದ್ದವರು ಒಂದು ಕಡೆ ಉಳಿಸಿ ಡಿಲೀಟ್ ಮಾಡಲಾಗಿದೆ. ಈಗಲೂ ಹೆಸರು ಬಿಟ್ಟಿರುವವರು ಹೆಸರನ್ನ ಸೇರಿಸಬಹುದು ಎಂದು ಹೇಳಿದರು.

ನಮ್ಮ ಜಿಲ್ಲೆಗೆ ಹೊಸ ಇವಿಎಂ ಯಂತ್ರ ಬಂದಿದೆ. ಅಲ್ಲದೇ, ಬೇರೆ ಬೇರೆ ಜಿಲ್ಲೆಗಳಿಗೂ ಕೂಡ ಇವಿಎಂ ಯಂತ್ರ ಹೋಗಿದೆ. ಇವಿಎಂ ಯಂತ್ರದ ಬಗ್ಗೆ ಅನುಮಾನ ಬೇಡ, ಎಲ್ಲರೂ ಹೋಗಿ ಅದನ್ನ ಪರೀಕ್ಷೆ ನಡೆಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ಜಾತಿ, ಧರ್ಮ ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುವುದಿಲ್ಲ: ಸಂಸದ ಪ್ರತಾಪ್ ಸಿಂಹ

ಕಾಂಗ್ರೆಸ್ ಪಕ್ಷದ ವಕ್ತಾರ ಎಚ್.ಎ. ವೆಂಕಟೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಮೈಸೂರಿನಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಲಾದ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮೈಸೂರಿನಲ್ಲಿ ಸುಮಾರು 1 ಲಕ್ಷದ 45 ಸಾವಿರ ಮತದಾರರ ಡಿಲೀಟ್ ಮಾಡಲಾಗಿದೆ. ಆದರೆ ಡಿಸಿ ಪ್ರತಿವರ್ಷದಂತೆ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದಾರೆ ಎಂದರು.

ಒಬ್ಬರ ಹೆಸರು, ಎರಡು ಬಾರಿ ಎಂಟ್ರಿಯಾಗಿರುತ್ತದೆ ಮತ್ತು ಒಬ್ಬರ ಹೆಸರೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಇರುತ್ತದೆ. ಅಂಥವರ ಹೆಸರನ್ನು ಮಾತ್ರ ಕೈ ಬಿಡಲಾಗಿದೆ. ಅದನ್ನು ಬಿಟ್ಟು ಬೇರೆ ಯಾವ ಅಕ್ರಮ ನಡೆದಿಲ್ಲ. ಹಾಗೇನಾದರೂ, ಅನುಮಾನ ಇದ್ದರೆ ದೂರು ನೀಡಿ ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ 1.45 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಇದಕ್ಕೆ ಸಮರ್ಪವಾದ ಮಾಹಿತಿ ನೀಡುವಂತೆ ಕಾಂಗ್ರೆಸ್ ನಿಯೋಗವು, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಭೇಟಿ ಮಾಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.