ಮೈಸೂರು : ಬಾವನ ಜೊತೆ ಪಾರ್ಟಿಗೆ ಹೋದ ಬಾಮೈದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ಕಾಮನಕೆರೆ ಹುಂಡಿಯಲ್ಲಿ ನಡೆದಿದೆ.
ಕಾಮನಕೆರೆ ಹುಂಡಿಯ ಮಣಿಕಂಠ(23) ಮೃತಪಟ್ಟ ವ್ಯಕ್ತಿ. ಈತ ತನ್ನ ಬಾವನ ಜೊತೆ ಕಾಮನಕೆರೆ ಸಮೀಪ ಪಾರ್ಟಿ ಮಾಡಲು ತೆರಳಿದ್ದಾನೆ. ನಂತರ ಕೆರೆಗೆ ಇಳಿದು ಈಜಲು ಹೋದಾಗ ಸುಸ್ತಾಗಿ ನೀರಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನ ಕೆರೆಯಿಂದ ಹೊರ ತೆಗೆದಿದ್ದಾರೆ.
ಕೆ ಆರ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆಂದು ಮೃತದೇಹ ರವಾನೆ ಮಾಡಲಾಗಿದೆ. ಈ ಸಂಬಂಧ ಎನ್ ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.