ETV Bharat / state

ಸೀರೆ ಖರೀದಿಸಲು ಬಂದು 4 ಲಕ್ಷ ರೂ. ಎಗರಿಸಿ ಪರಾರಿಯಾದ ಚಾಲಾಕಿ ಕಳ್ಳಿ.. CCTV ವಿಡಿಯೋ - ಮೈಸೂರಿನಲ್ಲಿ ಸೀರೆ ಖರೀದಿಸಲು ಬಂದು ನಾಲ್ಕು ಲಕ್ಷ ಕದ್ದು ಹೋದಳು ಚಾಲಾಕಿ

ಹಣ ಕಳೆದುಕೊಂಡ ಮಹಿಳೆ ಮೈಸೂರಿನ ತಮ್ಮ ಸ್ನೇಹಿತರಿಂದ ಪಡೆದಿದ್ದ 4 ಲಕ್ಷ ರೂ.ಸಾಲ ತೀರಿಸಲೆಂದು ನಗರಕ್ಕೆ ಬಂದಿದ್ದರು. ಸುಮಂಗಲಿ ಸಿಲ್ಕ್ ಅಂಗಡಿಯಲ್ಲಿ ಸೀರೆ ಖರೀದಿಗೆಂದು ಹೋಗಿದ್ದಾಗ ಕಳ್ಳತನ ನಡೆದಿದೆ..

ಸೀರೆ ಖರೀದಿಸಲು ಬಂದು 4 ಲಕ್ಷ ಎಗರಿಸಿ ಪರಾರಿಯಾದ ಚಾಲಾಕಿ ಕಳ್ಳಿ

author img

By

Published : Sep 10, 2021, 3:51 PM IST

ಮೈಸೂರು : ಮಹಿಳೆಯೋರ್ವಳು ಸೀರೆ ಖದೀರಿ ಮಾಡಲು ಬಂದು 4 ಲಕ್ಷ ರೂ‌‌‌‌.ಕದ್ದು ಅಂಗಡಿಯಿಂದ ಪರಾರಿಯಾಗಿರುವ ಘಟನೆ ನಗರದ ಸುಮಂಗಲಿ ಸಿಲ್ಕ್ ಅಂಗಡಿಯಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನ ನಾಗಮ್ಮ ಹಣ ಕಳೆದುಕೊಂಡ ಮಹಿಳೆ. ಇವರು ಮೈಸೂರಿನ ತಮ್ಮ ಸ್ನೇಹಿತರಿಂದ ಪಡೆದಿದ್ದ ನಾಲ್ಕು ಲಕ್ಷ ರೂ.ಸಾಲ ತೀರಿಸಲೆಂದು ನಗರಕ್ಕೆ ಬಂದಿದ್ದರು. ಈ ವೇಳೆ ಸುಮಂಗಲಿ ಸಿಲ್ಕ್ ಅಂಗಡಿಯಲ್ಲಿ ಸೀರೆ ಖರೀದಿಗೆ ಹೋಗಿದ್ದಾರೆ.

ಆ ಸಮಯದಲ್ಲೇ ಸೀರೆ ಅಂಗಡಿಗೆ ಎಂಟ್ರಿ ಕೊಟ್ಟ ಚಾಲಾಕಿ ಕಳ್ಳಿ, ನಾಗಮ್ಮ ಅವರ ಬ್ಯಾಗ್​​ನಲ್ಲಿದ್ದ ನಾಲ್ಕು ಲಕ್ಷ ರೂ.ಹಣ ಕದ್ದು ಪರಾರಿಯಾಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣ ಕಳೆದುಕೊಂಡು ಕಂಗಾಲದ ನಾಗಮ್ಮ, ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : ನಿಲ್ಲದ ಕಾಮುಕರ ಅಟ್ಟಹಾಸ.. 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.