ETV Bharat / state

ಮೈಸೂರಿನಲ್ಲಿ ಉಂಡ ಮನೆಗೆ ಕನ್ನಹಾಕಿದ ನೌಕರ ಅರೆಸ್ಟ್: 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

author img

By

Published : Aug 6, 2021, 7:08 AM IST

ಜುವೆಲ್ಲರ್ಸ್ ಅಂಗಡಿಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದವನೇ ಬರೋಬ್ಬರಿ 600 ಗ್ರಾಂನಷ್ಟು ಚಿನ್ನ ಕಳ್ಳತನ ಮಾಡಿದ್ದು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

mysore
ಹುಣಸೂರು ಪಟ್ಟಣ ಪೊಲೀಸರು

ಮೈಸೂರು: ತಾನು ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಿದ್ದ ಖದೀಮನನ್ನು ಹುಣಸೂರು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 25 ಲಕ್ಷ ರೂ. ಮೌಲ್ಯದ 503 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದ ನಿವಾಸಿ ಶಿವರಾಂ ಬಂಧಿತ ಆರೋಪಿ. ಈತ ಪಟ್ಟಣದಲ್ಲಿರುವ ಪಾರಸ್ ಪೃಥ್ವಿ ಜುವೆಲ್ಲರ್ಸ್ ಅಂಗಡಿಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಆದರೆ ಆಗಸ್ಟ್ 2 ರಂದು ಅಂಗಡಿಯಿಂದ ಸುಮಾರು 600 ಗ್ರಾಂನಷ್ಟು ಚಿನ್ನ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಮಾಲೀಕರು, ನೌಕರ ಶಿವರಾಂ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿದ ಪೊಲೀಸರು, ಶಿವರಾಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸತ್ಯ ಬಹಿರಂಗವಾಗಿದೆ.

ಆರೋಪಿಯಿಂದ 25 ಲಕ್ಷ ರೂ. ಮೌಲ್ಯದ 506 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.