ಮೈಸೂರು: ಮಾನಸ ಗಂಗೋತ್ರಿಯ ಕ್ಯಾಂಪಸ್ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ವಕೀಲರ ತಂಡ ಮೈಸೂರು ನ್ಯಾಯಾಲಯಕ್ಕೆ ಆಗಮಿಸಿತು.
ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ವಕೀಲರ ಆಗಮನವಾಗಿದ್ದು 200ಕ್ಕೂ ಹೆಚ್ಚು ವಕೀಲರು ಸಹಿ ಮಾಡಿರುವ ವಕಾಲತ್ತು ಪತ್ರವನ್ನು ವಕೀಲರ ತಂಡ ತಂದಿದೆ.
ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದೆ ವಕೀಲರ ತಂಡ ಹಾಜರಾಗಿ ಚರ್ಚೆ ನಡೆಸಲಿದೆ ಎಂದು ವಕೀಲರಾದ ಜಗದೀಶ್ ಹಾಗೂ ಮಂಜು ತಿಳಿಸಿದ್ದಾರೆ.