ETV Bharat / state

ವೇದಿಕೆಯಲ್ಲಿ ಅಕ್ಕಪಕ್ಕ ಕುರ್ಚಿಗಳಿದ್ದರೂ ದೂರ ದೂರ ಕುಳಿತ ಕುಚುಕುಗಳು..! - ಎಸ್​.ಟಿ.ಸೋಮಶೇಖರ್ ಮತ್ತು ಹೆಚ್​.ವಿಶ್ವನಾಥ್ ಸುದ್ದಿ

ಕುಚುಕು ಗೆಳೆಯರಾಗಿದ್ದ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಧ್ಯೆ ಬಿರುಕು ಮೂಡಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ.

st somashekar
ಎಸ್​.ಟಿ.ಸೋಮಶೇಖರ್ ಹಾಗೂ ಹೆಚ್​.ವಿಶ್ವನಾಥ್ ಪ್ರತಿಕ್ರಿಯೆ
author img

By

Published : Oct 20, 2020, 5:01 PM IST

Updated : Oct 20, 2020, 5:21 PM IST

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸ್ನೇಹದಲ್ಲಿ ಬಿರುಕು ಮೂಡಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಇವರಿಬ್ಬರು ಕುಳಿತಿದ್ದ ದೃಶ್ಯಗಳೇ ಇದಕ್ಕೆ ಸಾಕ್ಷಿ ಎಂಬಂತಿದೆ.

ಮೈತ್ರಿ ಸರ್ಕಾರ ಪತನದ ವೇಳೆ ಕುಚುಕುಗಳಾಗಿದ್ದ ಸೋಮಶೇಖರ್ ಹಾಗೂ ವಿಶ್ವನಾಥ್, ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಕುರ್ಚಿಗಳು ಖಾಲಿಯಿದ್ದರೂ, ನಾನೊಂದು ತೀರ, ನೀನೊಂದು ತೀರಾ ಎಂಬಂತೆ ಮುಖ ತಿರುಗಿಸಿ ಕುಳಿತಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್​.ವಿಶ್ವನಾಥ್​​, ಸುಮ್​ ಸುಮ್ನೆ ಮಂತ್ರಿ ಜತೆ ನಾನ್ಯಾಕೆ ಸುತ್ತಲಿ, ನಾನೇನು ಹೊಸಬನೇ, ನಾನು ಮಂತ್ರಿಯಾಗಿ ಎಲ್ಲ ನೋಡಿರೋನು, ದೊಡ್ಡ ದೊಡ್ಡ ಜವಾಬ್ದಾರಿ ನಿಭಾಯಿಸಿರೋನು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಎಸ್​.ಟಿ.ಸೋಮಶೇಖರ್ ಹಾಗೂ ಹೆಚ್​.ವಿಶ್ವನಾಥ್ ಪ್ರತಿಕ್ರಿಯೆ

ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಸ್​.ಟಿ.ಸೋಮಶೇಖರ್, ನಮಗೂ ವಿಶ್ವನಾಥ್​​ಗೆ ಯಾವುದೇ ಅಸಮಾಧಾನವಿಲ್ಲ, ಬಾಂಬೆಯಲ್ಲೂ ಚೆನ್ನಾಗಿದ್ವಿ, ಇಲ್ಲೂ ಚೆನ್ನಾಗಿದ್ದೀವಿ, ಅವರಿಗೆ ಎಂಎಲ್​​ಸಿ ಸ್ಥಾನ ಕೊಡಲ್ಲ ಎಂದಾಗ ನಾನೇ ಜಾಸ್ತಿ ಒತ್ತಡ ಹಾಕಿ ಕೊಡಿಸಿದ್ದು. ಆದರೆ, ಸಂಪುಟಕ್ಕೆ ಸೇರಿಸಿಕೊಳ್ಳೋದು, ಬಿಡೋದು ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದರು.

Last Updated : Oct 20, 2020, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.