ETV Bharat / state

ಮೈಸೂರಿನಲ್ಲಿ ತಯಾರಾಯ್ತು ಚಾರ್ಜಬಲ್ ತಳ್ಳೋಗಾಡಿ: ಇದರ ಕಾರ್ಯವೈಖರಿ ಹೇಗಿದೆ ಗೊತ್ತಾ!?

ಮನೆ ಮನೆಗೆ ತೆರಳಿ ತಳ್ಳೋಗಾಡಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಮೈಸೂರಿನ ಯುವಕರ ತಂಡ ಎಲೆಕ್ಟ್ರಿಕ್ ಚಾರ್ಜಿಂಗ್ ಅಳವಡಿಸಿ ರಸ್ತೆ ಬದಿಯ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

A high tech touch to the pushcart in mysore

author img

By

Published : Jul 18, 2022, 3:05 PM IST

ಮೈಸೂರು: ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಇನ್ನು ಮುಂದೆ ತಳ್ಳೋಗಾಡಿಯನ್ನು ಕಷ್ಟಪಟ್ಟು ತಳ್ಳುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಚಾರ್ಜಿಂಗ್ ವ್ಯವಸ್ಥೆಯಿಂದ ಸಂಚರಿಸುವ ಹಾಗೆ ಹೊಸ ತಂತ್ರಜ್ಞಾನ ಕಂಡು ಹಿಡಿದ್ದಿದ್ದಾರೆ ಮೈಸೂರಿನ ಯುವಕರು. ಹಾಗಾದರೆ ಈ ಚಾರ್ಜಿಂಗ್​​ನಿಂದ ಹೇಗೆ ಅದು ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.

ಮನೆ ಮನೆಗೆ ತೆರಳಿ ತಳ್ಳೋಗಾಡಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಮೈಸೂರಿನ ಯುವಕರ ತಂಡ ಎಲೆಕ್ಟ್ರಿಕ್ ಚಾರ್ಜಿಂಗ್ ಅಳವಡಿಸಿ ರಸ್ತೆ ಬದಿಯ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ವಿಶೇಷ ಎಂದರೆ ಇದರಲ್ಲಿ 3 ಚಕ್ರ ಇರಲಿದೆ.

ಎಲೆಕ್ಟ್ರಿಕ್​ ವೆಂಡರ್ ಕಾರ್ಟ್ : ಮೂರು ಚಕ್ರದ ಈ ತಳ್ಳೋಗಾಡಿಗೆ ಇ ವಿ ಕಾರ್ಟ್ ಎಂದು ಹೆಸರಿಡಲಾಗಿದ್ದು, ಈ ಇದಕ್ಕೆ ಬ್ಯಾಟರಿ ಅಳವಡಿಸಲಾಗಿದೆ. ಗಾಡಿಯ ಮೇಲೆ ಕುಳಿತು ಸಹ ವ್ಯಾಪರಮಾಡಬಹುದು. ಪ್ರತಿದಿನ 5 ರಿಂದ 6 ಗಂಟೆ ಚಾರ್ಜ್ ಮಾಡಿದರೆ 50 ಕಿ. ಮೀ. ವರೆಗೆ ಇದರಿಂದ ಸಂಚಾರ ಮಾಡಬಹುದು. ಹಾಗೆ ಈ ಗಾಡಿಗೆ 200 ರಿಂದ 250 ಕೆ.ಜಿ ಸರಕುಗಳನ್ನು ಹೊರುವ ಸಾಮರ್ಥ್ಯ ಇದೆ. ತಳ್ಳೋಗಾಡಿಗೆ ಸೈಕಲ್ ಹ್ಯಾಂಡ್ ಅಳವಡಿಸಲಾಗಿದ್ದು, ಅದರಲ್ಲಿ ಎಕ್ಸಲೇಟರ್ ಸಹ ಇದೆ. ಈ ಮೂಲಕ ತುಂಬಾ ಸ್ಮಾರ್ಟ್​ ಆಗಿ ರೂಪುಗೊಳಿಸಲಾಗಿದೆ.

ಅನುಕೂಲ ಏನು: ರಸ್ತೆ ಬದಿಯ ವ್ಯಾಪಾರಸ್ಥರು ನಿತ್ಯ ತಳ್ಳೋಗಾಡಿಯಲ್ಲಿ 10 ರಿಂದ 15 ಕಿ ಮೀ ಸುತ್ತುಹಾಕಿ ವ್ಯಾಪಾರ ಮಾಡಬೇಕು ಕಷ್ಟಪಟ್ಟು ತಳ್ಳಿಕೊಂಡೇ ವ್ಯಾಪಾರ ಮಾಡಬೇಕು. ಆದರೆ, ಈ ಇವಿ ಕಾರ್ಟ್ ತಳ್ಳೋಗಾಡಿಯಿಂದ ಆರಾಮದಾಯಕ ಸವಾರಿ ಮಾಡಿ ಹೆಚ್ಚಿನ ಪ್ರದೇಶಗಳಿಗೆ ಹೋಗಿ ಹೆಚ್ಚಿನ ವ್ಯಾಪಾರವನ್ನೂ ಮಾಡಿ ಜೊತೆಗೆ ಹೆಚ್ಚು ಹಣ ಗಳಿಸಲು ಸಹಕಾರಿಯಾಗುತ್ತದೆ.

ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳಾದ ಬಿ.ಕೆ ಹೇಮಂತ್ ಕುಮಾರ್, ಕಿರಣ್, ಕೌಸ್ತುಭ್ ವಿದ್ಯಾರ್ಥಿಗಳು ಈ ಸಂಶೋಧನೆ ಮಾಡಿದ್ದು ,ಬೀದಿ ಬದಿಯ ವ್ಯಾಪಾರಸ್ಥರಿಗೆ ಅನುಕೂಲ ಆಗುವ ದೃಷ್ಟಿಯಿಂದ ಈ ಕೆಲಸ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಬರುವ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಸಂಶೋಧನೆ ನಡೆಸಿ ತಳ್ಳೋಗಾಡಿಗೆ ಎಲೆಕ್ಟ್ರಿಕ್ ಚಾರ್ಜಬಲ್ ಬ್ಯಾಟರಿ ಅಳವಡಿಸಿ ಸುಲಭವಾಗಿ ಚಲಿಸುವ ಇವಿ ಕಾರ್ಟ್ ಹೆಸರಿನ ಎಲೆಕ್ಟ್ರಿಕ್ ತಳ್ಳೋಗಾಡಿಯನ್ನು ಈ ಮೂಲಕ ಕಂಡು ಹಿಡಿದಿದ್ದಾರೆ. ಇವರ ಕಾರ್ಯಕ್ಕೆ ಸ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಅಥಣಿಯಲ್ಲಿ ಸೆರೆಸಿಕ್ಕ ಅಪರೂಪದ ಪುನುಗು ಬೆಕ್ಕು - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.