ETV Bharat / state

ಆಷಾಢ ಮಾಸದಲ್ಲಿ ತವರಿಗೆ ಬಂದ ಯುವತಿ.. ಪ್ರಿಯಕರನ ಜೊತೆ ಪರಾರಿಯಾಗಿದ್ದ ನವವಧು ಆತ್ಮಹತ್ಯೆ - ಈಟಿವಿ ಭಾರತ ಕನ್ನಡ ನ್ಯೂಸ್

ಪ್ರಿಯಕರನ ಜೊತೆ ಪರಾರಿಯಾಗಿದ್ದ ನವವಧು, ಪ್ರಿಯಕರನಿಂದ ಬೇರ್ಪಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

a-newly-wed-women-commits-suicide
ಮೈಸೂರು : ಪ್ರಿಯಕರನ ಜೊತೆ ಪರಾರಿಯಾಗಿದ್ದ ನವವಧು ಆತ್ಮಹತ್ಯೆ
author img

By

Published : Aug 10, 2022, 12:41 PM IST

ಮೈಸೂರು : ಆಷಾಢ ಮಾಸದ ಹಿನ್ನೆಲೆ ತವರು ಮನೆಗೆ ಬಂದಿದ್ದ ನವವಧು ತನ್ನ ಪ್ರಿಯಕರನ ಜೊತೆಗೆ ಪರಾರಿಯಾಗಿ, ಬಳಿಕ ಆತನಿಂದ ಬೇರ್ಪಟ್ಟ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ವರ್ಷಿತಾ (20) ಎಂದು ಗುರುತಿಸಲಾಗಿದೆ.

ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಈ ಬಗ್ಗೆ ಆಕೆಯ ಪೋಷಕರು ಮಗಳ ಮನವೊಲಿಸಿ ಚಾಮರಾಜನಗರದ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆಷಾಢ ಮಾಸ ಹಿನ್ನೆಲೆ ವರ್ಷಿತಾ ತವರು ಮನೆಗೆ ಬಂದಿದ್ದು, ಈ ವೇಳೆ ಪ್ರಿಯತಮ ಕಿರಣ್ ಜೊತೆ ಓಡಿಹೋಗಿದ್ದರು.

ವರ್ಷಿತಾ ಕಾಣೆಯಾದ ಬಗ್ಗೆ ಪೋಷಕರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪರಾರಿಯಾಗಿದ್ದ ವರ್ಷಿತಾ ಹಾಗೂ ಕಿರಣ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು, ವಾಪಸ್ ಕರೆತಂದ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಬೇರ್ಪಡಿಸಿದ್ದರು. ಬಳಿಕ ವರ್ಷಿತಾ ಮೈಸೂರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ 3 ದಿನ ಇದ್ದು ಬಳಿಕ ರಾಂಪುರದಲ್ಲಿರುವ ತಾತನ ಮನೆಗೆ ಬಂದಿದ್ದರು. ಪ್ರಿಯಕರನನ್ನು ದೂರ ಮಾಡಿದ್ದಕ್ಕೆ ಮನನೊಂದಿದ್ದ ವರ್ಷಿತಾ ತಾತನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ : ಖಾಸಗಿ ಬಸ್ ಪಲ್ಟಿ: 9ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.