ಮೈಸೂರು: ಕೋವಿಡ್ ಲಸಿಕೆ ಪ್ರಯೋಗ ಸಂಬಂಧ ಶೀಘ್ರದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಪ್ರಮಾಣದಲ್ಲಿ ಯಾವ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ನೀಡಬೇಕೆಂಬುವುದರ ಬಗ್ಗೆ ಚರ್ಚೆ ನಡೆಸಲಾಗುವುದು. ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇಡೀ ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಿರೋದು ಕರ್ನಾಟಕದಲ್ಲಿ, ಇದೇ ಸ್ಥಿತಿ ಮುಂದುವರೆದರೆ ಇನ್ನೆರೆಡು ತಿಂಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು.
ಬಾಂಬೆಗೆ ಹೋಗಿದ್ದ 17 ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಾಗಿದ್ದೀವಿ. ಅಲ್ಲದೇ 117 ಮಂದಿ ಶಾಸಕರು ಕೂಡ ಒಗ್ಗಟ್ಟಾಗಿದ್ದೇವೆ. ಸಚಿವ ಸ್ಥಾನ ನೀಡುವುದು ಸಿಎಂಗೆ ಬಿಟ್ಟ ವಿಚಾರ, ಈಗ ನಮ್ಮ ಮುಂದಿರೋದು ಕೋವಿಡ್ ನಿಯಂತ್ರಣ, ಉಪ ಚುನಾವಣೆ ಎಂದರು.