ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಖುಷಿ ಎಂಬ ಜಿರಾಫೆ ಗಂಡು ಮರಿಗೆ ಜನ್ಮ ನೀಡುವ ಮೂಲಕ ಮೃಗಾಲಯಕ್ಕೆ ಹೊಸ ಅತಿಥಿಯನ್ನು ನೀಡಿದೆ. ಇದು ಪ್ರಾಣಿಪ್ರಿಯರಿಗೆ ಸಂತಸ ತಂದಿದೆ.
ಖುಷಿ ಜಿರಾಫೆ ಗಂಡು ಮರಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿ ಆರೋಗ್ಯವಾಗಿವೆ. ಎರಡನ್ನೂ ಮೃಗಾಲಯದ ಸಿಬ್ಬಂದಿ ವಿಶೇಷ ಆರೈಕೆ ಮಾಡುತ್ತಿದ್ದಾರೆ. ಮಂಗಳೂರಿನ ಪಿಲಿಕುಳದಿಂದ ತರಲಾಗಿದ್ದ ಹುಲಿ ಹಾಗೂ ಹೆಬ್ಬಾವು ಅನಾರೋಗ್ಯದಿಂದ ಮೃತಪಟ್ಟ ವಿಷಯದಿಂದ ಬೇಸರಗೊಂಡಿದ್ದ ಪ್ರಾಣಿಪ್ರಿಯರಿಗೆ ಇದೀಗ ಜಿರಾಫೆ ಮರಿ ನೋಡುವ ಭಾಗ್ಯ ಸಿಕ್ಕಿದೆ.